alex Certify ಮಕ್ಕಳಿಬ್ಬರ ಪ್ರಾಣಕ್ಕೆ ಕುತ್ತು ತಂದ ಕಣ್ಣಾಮುಚ್ಚಾಲೆ ಆಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಬ್ಬರ ಪ್ರಾಣಕ್ಕೆ ಕುತ್ತು ತಂದ ಕಣ್ಣಾಮುಚ್ಚಾಲೆ ಆಟ

ಮಕ್ಕಳಿಬ್ಬರ ಕಣ್ಣಾಮುಚ್ಚಾಲೆ ಆಟ ಅವರ ಜೀವಕ್ಕೇ ಕುತ್ತು ತಂದ ಹೃದಯ ವಿದ್ರಾವಕ ಘಟನೆ ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ನಡೆದಿದೆ.

12 ವರ್ಷದ ಭಾಗ್ಯ ನಾಯಕ್ ಮತ್ತು 7 ವರ್ಷದ ಕಾವ್ಯ ನಾಯಕ್ ಎಂಬ ಮಕ್ಕಳು ತಮ್ಮ ಇತರೆ ಸ್ನೇಹಿತರ ಜೊತೆಗೆ ಕಣ್ಣಾಮುಚ್ಚಾಲೆ ಆಟದಲ್ಲಿ ತೊಡಗಿದ್ದಾರೆ. ಇವರಿಬ್ಬರು ಬಚ್ಚಿಟ್ಟುಕೊಳ್ಳಲು ಒಂದು ಜಾಗವೊಂದನ್ನು ಹುಡುಕುತ್ತಿದ್ದಾಗ ಸನಿಹದಲ್ಲೇ ನಿಂತಿದ್ದ ಐಸ್ ಕ್ರೀಂ ಗಾಡಿ ಕಂಡಿದೆ. ಏನೂ ಅರಿಯದ ಮಕ್ಕಳಿಬ್ಬರು ಐಸ್ ಕ್ರೀಂ ಗಾಡಿಯ ಪೆಟ್ಟಿಗೆಯಲ್ಲಿ ಬಚ್ಚಿಟ್ಟುಕೊಂಡರೆ ಹೇಗೆ ಎಂದು ಯೋಚಿಸಿ ತಡ ಮಾಡದೇ ಅದರೊಳಗೆ ಸೇರಿದ್ದಾರೆ.

ಲಾರಿಗಳ ಮುಖಾಮುಖಿ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು

ಒಳಗೆ ಹೋದ ಇವರಿಬ್ಬರೂ ಲಾಕ್ ಮಾಡಿಕೊಂಡಿದ್ದಾರೆ. ಎಷ್ಟು ಹೊತ್ತಾದರೂ ಅವರು ಪತ್ತೆ ಆಗಲೇ ಇಲ್ಲ. ಆದರೆ, ಒಳಗೆ ಲಾಕ್ ಮಾಡಿಕೊಂಡಿದ್ದ ಇಬ್ಬರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬಾಕ್ಸ್ ಒಳಗಿನ ಪದರಗಳು ದಪ್ಪವಾಗಿದ್ದುದರಿಂದ ಕೂಗಿಕೊಂಡರೂ ಕೇಳುತ್ತಿರಲಿಲ್ಲ.

ಸುಮಾರು 30 ನಿಮಿಷದವರೆಗೆ ಸಹಪಾಠಿಗಳು ಅವರನ್ನು ಹುಡುಕುವ ವಿಫಲ ಯತ್ನ ನಡೆಸಿದ್ದಾರೆ. ಪತ್ತೆಯಾಗದ ಹಿನ್ನೆಲೆಯಲ್ಲಿ ಪೋಷಕರಿಗೆ ತಿಳಿಸಿದ್ದಾರೆ. ಎಲ್ಲರೂ ಸೇರಿ ಹುಡುಕಿದಾಗ ಮಕ್ಕಳಿಬ್ಬರು ಐಸ್ ಕ್ರೀಂ ಬಾಕ್ಸ್ ನಲ್ಲಿ ಸಾವನ್ನಪ್ಪಿರುವುದು ಪತ್ತೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...