alex Certify ಕಾಡಿನಲ್ಲಿದ್ದ ನಿಗೂಢ ಟೇಬಲ್ ಕಂಡು ಛಾಯಾಗ್ರಾಹಕನಿಗೆ ಅಚ್ಚರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಡಿನಲ್ಲಿದ್ದ ನಿಗೂಢ ಟೇಬಲ್ ಕಂಡು ಛಾಯಾಗ್ರಾಹಕನಿಗೆ ಅಚ್ಚರಿ…!

ಕಾಡಿನಲ್ಲಿ ನಿಗೂಢವಾದ ಟೇಬಲ್ ಕಂಡು ಛಾಯಾಗ್ರಾಹಕನೊಬ್ಬ ಆಘಾತಗೊಂಡಿದ್ದಾನೆ. ಯುಕೆ ಯ ಲೇಕ್ ಡಿಸ್ಟ್ರಿಕ್ಟ್ ನ ಕಾಡಿನಲ್ಲಿ ಟೇಬಲ್ ಹಾಗೂ ಎರಡು ಕುರ್ಚಿಗಳನ್ನು ನೋಡಿದ ಛಾಯಾಗ್ರಾಹಕ ಆಶ್ಲೇ ಕೂಪರ್ ಆಘಾತಕ್ಕೊಳಗಾಗಿದ್ದಾನೆ. ಈತ ಆರಂಭದಲ್ಲಿ ಇದು ಕಲೆಯ ಸ್ಥಾಪನೆ ಎಂದು ಊಹಿಸಿದ್ದಾನೆ. ಆದರೆ, ಅರ್ಧ ತಿಂದ ಆಹಾರ ಮತ್ತು ವೈನ್ ಲೋಟಗಳು ಇರುವುದನ್ನು ಗಮನಿಸಿದ ಆತ ಶಾಕ್ ಆಗಿದ್ದಾನೆ.

ಈ ಟೇಬಲ್ ಇದ್ದ ಜಾಗ ಮಾರ್ಗದಿಂದ 100 ಮೀಟರ್ ದೂರದಲ್ಲಿದೆಯಷ್ಟೆ. “ಇದು ಕಾಡಿನಲ್ಲಿ ಒಂದು ರೋಮ್ಯಾಂಟಿಕ್ ಊಟದಂತೆ ಕಾಣುತ್ತದೆ. ಆದರೆ ನಂತರ ಅವರು ಸ್ವಚ್ಛಗೊಳಿಸಲು ಸಾಧ್ಯವಾಗಲಿಲ್ಲ. ಇದು ಕೇವಲ ಅವರು ಊಟ ಮುಗಿಸಿ ಎದ್ದು. ಎಲ್ಲವನ್ನೂ ಬಿಟ್ಟಂತೆ ಕಾಣುತ್ತಿದೆ ಎಂದು ಕೂಪರ್ ತಿಳಿಸಿದ್ದಾರೆ.

ಇದೀಗ ರೊಮ್ಯಾಂಟಿಕ್ ಸಂದರ್ಭಗಳನ್ನು ಪ್ರದರ್ಶಿಸುವ ಡೇಟ್‌ಮೇಟ್ ಕಂಪನಿಯು ಸ್ಪಷ್ಟೀಕರಣ ನೀಡಿದೆ. ರಜೆಯಲ್ಲಿದ್ದ ಸ್ಟಾಫರ್ಡ್‌ಶೈರ್ ದಂಪತಿಗಳಿಗೆ ಲೇಕ್ ಜಿಲ್ಲೆಯಲ್ಲಿ ಈವೆಂಟ್ ಅನ್ನು ಮಾಡಲಾಯಿತು ಎಂದು ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...