alex Certify ಈ ಸ್ಥಳಗಳಿಗೆ ಭೇಟಿ ನೀಡಲು ಹೆದರ್ತಾರೆ ಜನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸ್ಥಳಗಳಿಗೆ ಭೇಟಿ ನೀಡಲು ಹೆದರ್ತಾರೆ ಜನ….!

ಜೀವ ಸಂಕುಲ ವಾಸಿಸಲು ಯೋಗ್ಯವಾಗಿರುವ ಗ್ರಹ ಭೂಮಿ ಮಾತ್ರ. ಭೂಮಿ ಮೇಲಿರುವ ಮನುಷ್ಯ, ಸತ್ತ ಮೇಲೆ ಮನುಷ್ಯ ಸ್ವರ್ಗ, ನರಕಕ್ಕೆ ಹೋಗ್ತಾನೆಂಬ ನಂಬಿಕೆಯಲ್ಲಿದ್ದಾನೆ. ಭೂಮಿ ಮೇಲೆ ಕೆಟ್ಟ ಕೆಲಸ ಮಾಡಿದವರು ನರಕಕ್ಕೆ ಹೋಗ್ತಾರೆನ್ನಲಾಗುತ್ತದೆ. ಆದ್ರೆ ಭೂಮಿ ಮೇಲೆಯೇ ಕೆಲ ನರಕಗಳಿವೆ.

ಸಾವಿನ ನಂತ್ರ ಆತ್ಮಗಳು, ಅಮೇರಿಕಾದ ಗಿನಿಯಾ ಗೇಟ್ಸ್‌ ಎಂಬ ಸ್ಥಳಕ್ಕೆ ಶುದ್ಧೀಕರಣಕ್ಕಾಗಿ ಬರುತ್ತವೆ ಎಂದು ಅಮೆರಿಕನ್ನರು ನಂಬಿದ್ದಾರೆ. ನಗರದ ಫ್ರೆಂಚ್ ಕ್ವಾರ್ಟರ್ ಬಳಿ ಇರುವ ಈ ಸ್ಥಳಕ್ಕೆ ಕೇವಲ ಆತ್ಮಗಳು ಮಾತ್ರ ಹೋಗಬಹುದು ಎಂದು ಸ್ಕ್ಯಾನ್ಯೂ ಓರ್ಲಿಯನ್ಸ್ ಜನರು ನಂಬಿದ್ದಾರೆ.

ಗಂಡನ ಮನೆಗೆ ನಗುನಗುತ್ತಾ ತೆರಳಿದ ವಧು: ಮುದ್ದಾದ ವಿಡಿಯೋ ವೈರಲ್

ನ್ಯಾಪಸ್ ಗುಹೆ. ಇದು ಇಟಲಿಯ ನೇಪಲ್ಸ್ ನಲ್ಲಿದೆ. ಇದರ ಬಗ್ಗೆ ನೂರಾರು ವರ್ಷಗಳ ಹಿಂದೆ ಬರೆದ ಕವಿತೆಯಲ್ಲಿ ಉಲ್ಲೇಖಿಸಲಾಗಿದೆ. 1932 ರಲ್ಲಿ, ಪುರಾತತ್ತ್ವ ಶಾಸ್ತ್ರಜ್ಞ ಅಮೆಡೊ ಮೈಯುರಿ ಇದನ್ನು ಗೇಟ್ ಆಫ್ ಹೆಲ್ ಎಂದು ಹೆಸರಿಟ್ಟಿದ್ದಾರೆ. ಇಲ್ಲಿಯವರೆಗೆ ಯಾರೂ ಈ ಗುಹೆಯ ಒಳಗೆ ಹೋಗಲು ಧೈರ್ಯ ಮಾಡಿಲ್ಲ.

ದೀಪಾವಳಿ ಸಂದರ್ಭದಲ್ಲಿ ಹೀಗಿರಲಿ ನಿಮ್ಮ ಸಾಕು ಪ್ರಾಣಿಗಳ ಆರೈಕೆ..!

ಮಧ್ಯ ಅಮೆರಿಕದಲ್ಲಿ ಬೆಲೀಜ್ ಗುಹೆಯಿದೆ. ಆಕ್ಟೂನ್ ಟುನಿಸಿಲ್ ಮುಕ್ನಾಲ್ ಗುಹೆಯಲ್ಲಿ ಸಾವಿನ ರಾಕ್ಷಸ ಇಲ್ಲಿ ವಾಸಿಸುತ್ತಾನೆ ಎಂದು ಇಲ್ಲಿನ ಜನರ ನಂಬಿಕೆ. ಇತ್ತೀಚೆಗೆ, 18 ವರ್ಷದ ಹುಡುಗಿಯ ಅಸ್ಥಿಪಂಜರವು ಇಲ್ಲಿ ಪತ್ತೆಯಾಗಿದೆ. ಸಾವಿರ ವರ್ಷಗಳ ಹಿಂದೆ ಈ ಹುಡುಗಿಯನ್ನು ಬಲಿಕೊಡಲಾಯಿತು ಎಂದು ಹೇಳಲಾಗುತ್ತದೆ.

ಟರ್ಕಿಯ ಡೆನಿಜ್ಲಿ ಪ್ರಾಂತ್ಯದ ಪ್ಲುಟೊ ಗೇಟ್ ಬಳಿಯಿರುವ ಹಳೆಯ ದೇವಸ್ಥಾನವನ್ನು ಪುರಾತತ್ತ್ವಜ್ಞರ ತಂಡವು ಉತ್ಖನನ ಮಾಡಿದೆ. ಇದರ ಇನ್ನೊಂದು ಬದಿಯ ಸುರಂಗದಿಂದ ವಿಷಕಾರಿ ಅನಿಲ ಸೋರಿಕೆಯಾಗಿದೆಯಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...