alex Certify ರಂಜಾನ್ ಉಪವಾಸ ಸಮಯದಲ್ಲೇ ಘೋರ ದುರಂತ: ಕಟ್ಟಡ ಕುಸಿದು 9 ಜನ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಂಜಾನ್ ಉಪವಾಸ ಸಮಯದಲ್ಲೇ ಘೋರ ದುರಂತ: ಕಟ್ಟಡ ಕುಸಿದು 9 ಜನ ಸಾವು

ಮುಲ್ತಾನ್: ಮಧ್ಯ ಪಾಕಿಸ್ತಾನದಲ್ಲಿ ಮಂಗಳವಾರ ಮೂರು ಅಂತಸ್ತಿನ ವಸತಿ ಕಟ್ಟಡ ಕುಸಿದು ಒಂಬತ್ತು ಜನರು ಸಾವನ್ನಪ್ಪಿದ್ದಾರೆ.

ಪೂರ್ವ ಪಂಜಾಬ್ ಪ್ರಾಂತ್ಯದ ಮುಲ್ತಾನ್ ನಗರದಲ್ಲಿ ಕುಸಿದ ಕಟ್ಟಡದ ಅವಶೇಷಗಳು ಸಮೀಪದ ಮನೆಗಳ ಮೇಲೂ ಬಿದ್ದಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದ್ದಾರೆ ಎಂದು ಹಿರಿಯ ಸರ್ಕಾರಿ ಅಧಿಕಾರಿ ರಿಜ್ವಾನ್ ಖದೀರ್ ಹೇಳಿದ್ದಾರೆ.

ಮೃತರ ಸಂಬಂಧಿ ಅಶ್ಫಾಕ್ ಮಲಿಕ್, “ಸೆಹ್ರಿ (ಉಪವಾಸ) ಸಮಯದಲ್ಲಿ” ಮುಂಜಾನೆ ಕಟ್ಟಡವು ಕುಸಿದಿದೆ ಎಂದು ಹೇಳಿದರು. “ಈ ಘಟನೆಯಲ್ಲಿ ನನ್ನ ಸೋದರಳಿಯ ಮತ್ತು ಸೊಸೆ ಮತ್ತು ಅವರ ಮಕ್ಕಳು ಮೃತಪಟ್ಟಿದ್ದಾರೆ. ಇದು ಸೆಹ್ರಿ(ಉಪವಾಸ) ಸಮಯದಲ್ಲಿ ಸಂಭವಿಸಿದೆ. ಮುಂಜಾನೆ ನನ್ನ ಸೋದರಳಿಯನ ಮನೆಯ ಮೇಲೆ ಸಿಡಿದ ಗ್ಯಾಸ್ ಸಿಲಿಂಡರ್‌ ನಿಂದ ನನ್ನ ಸೋದರಳಿಯ ಮನೆಯ ಮುಂದಿನ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ. ನನ್ನ ಸೋದರಳಿಯನ ಇಡೀ ಕುಟುಂಬ ತೀರಿಕೊಂಡಿತು ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...