alex Certify ನನ್ನ ಅಜ್ಜನಿಗೆ ತರಗತಿಯಲ್ಲಿ ಕುಳಿತುಕೊಳ್ಳಲೂ ಅವಕಾಶವಿರಲಿಲ್ಲ…! ಆಕ್ಸ್‌ ಫರ್ಡ್‌ ವಿವಿಯಿಂದ ಪದವಿ ಪಡೆದಾಕೆಯ ಪೋಸ್ಟ್​ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನ್ನ ಅಜ್ಜನಿಗೆ ತರಗತಿಯಲ್ಲಿ ಕುಳಿತುಕೊಳ್ಳಲೂ ಅವಕಾಶವಿರಲಿಲ್ಲ…! ಆಕ್ಸ್‌ ಫರ್ಡ್‌ ವಿವಿಯಿಂದ ಪದವಿ ಪಡೆದಾಕೆಯ ಪೋಸ್ಟ್​ ವೈರಲ್​

ಆಕ್ಸಫರ್ಡ್​ ವಿಶ್ವವಿದ್ಯಾಲಯದಿಂದ ಸಾಮಾಜಿಕ ರಾಜಕೀಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಜೂಹಿ ಕೋರೆ ಎಂಬುವರು ತನ್ನ ದಿವಂಗತ ಅಜ್ಜನ ಕುರಿತು ಲಿಂಕ್ಡ್​ಇನ್​ನಲ್ಲಿ ನೋಟ್​ ಬರೆದಿದ್ದಾರೆ.

ಅವರ ಪೋಸ್ಟ್​ ವೈರಲ್​ ಆಗಿದ್ದು, ಶಿಕ್ಷಣವನ್ನು ಪಡೆಯುವಲ್ಲಿ ಅವರ ಸ್ವಂತ ಹೋರಾಟಗಳನ್ನು ವಿವರಿಸಿದ್ದಾರೆ ಮತ್ತು ಅವರ ಕಠಿಣ ಪರಿಶ್ರಮವು ತನ್ನ ಕನಸನ್ನು ಯಶಸ್ವಿಯಾಗಲು ಮತ್ತು ನನಸಾಗಿಸಲು ಹೇಗೆ ದಾರಿ ಮಾಡಿಕೊಟ್ಟಿತು ಎಂದು ವಿವರಿಸಿದ್ದಾರೆ.

ಮಹಾರಾಷ್ಟ್ರದ ಕೆಳಜಾತಿ ಕುಟುಂಬಕ್ಕೆ ಸೇರಿದ ತನ್ನ ಅಜ್ಜ ತನ್ನ ಬಾಲ್ಯದುದ್ದಕ್ಕೂ ಓದುವ ಹಕ್ಕಿಗಾಗಿ ಹೋರಾಡಬೇಕಾಯಿತು ಎಂದು ಜೂಹಿ ಹೇಳಿದ್ದಾರೆ. 1947 ರಲ್ಲಿ ಭಾರತವನ್ನು ಸ್ವತಂತ್ರ ದೇಶವೆಂದು ಘೋಷಿಸಲಾಯಿತು, ಪ್ರತಿಯೊಬ್ಬ ನಾಗರಿಕರಿಗೂ ಅಂದು ಸ್ವತಂತ್ರ ಜೀವನವನ್ನು ನಡೆಸಲು ಅವಕಾಶವಿರಲಿಲ್ಲ ಎಂದು ಅವರು ಬರೆದಿದ್ದಾರೆ.

ಶಾಲಾ ವಯಸ್ಸಿನ ಹುಡುಗನಾಗಿದ್ದರೂ ನನ್ನ ಅಜ್ಜನ ಕುಟುಂಬವು ಎರಡು ಪ್ರಾಥಮಿಕ ಕಾರಣಗಳಿಗಾಗಿ ಆತನನ್ನು ಶಾಲೆಗೆ ಹೋಗುವುದನ್ನು ಬಯಸಲಿಲ್ಲ. ಮನೆಯಲ್ಲಿದ್ದ ನಾಲ್ವರಲ್ಲಿ ಹಿರಿಯನಾಗಿ, ಅವನು ಜಮೀನಿನಲ್ಲಿ ಕೆಲಸ ಮಾಡಬೇಕಾಗಿತ್ತು, ಆತ ಕೆಲಸ ಮಾಡಿದರೆ ಕುಟುಂಬವು ಸಾಕಷ್ಟು ಆಹಾರವನ್ನು ಗಳಿಸಬಹುದು ಎಂಬ ಲೆಕ್ಕಾಚಾರ ಹಾಗೂ ಇತರ ವಿದ್ಯಾರ್ಥಿಗಳು, ಶಿಕ್ಷಕರು ಹೇಗೆ ನಡೆಸಿಕೊಳ್ಳಬಹುದು ಎಂದು ಕುಟುಂಬದವರು ಹೆದರುತ್ತಿದ್ದರು ಎಂದು ಬರೆದಿದ್ದಾರೆ.

ಇದನ್ನು ಲೆಕ್ಕಿಸದೆ ಅಜ್ಜ ತನ್ನ ಹೆತ್ತವರೊಂದಿಗೆ ವ್ಯಾಸಂಗ ಮಾಡುವುದಕ್ಕಾಗಿ ಒಡಂಬಡಿಕೆ ಮಾಡಿಕೊಂಡಿದ್ದು, ಬೆಳಿಗ್ಗೆ 3 ಗಂಟೆಯಿಂದ ಜಮೀನಿನಲ್ಲಿ ಕೆಲಸ ಮಾಡಿ, ಮಧ್ಯಾಹ್ನದ ನಂತರ ಶಾಲೆಗೆ ಹೋಗಬೇಕಾಗಿತ್ತು. ದುರದೃಷ್ಟವಶಾತ್​, ಪ್ರತಿದಿನ ಸುಮಾರು 1.5 ಗಂಟೆಗಳ ಕಾಲ ನಡೆದು ಹೋಗುವ ಸಂದರ್ಭ ಇದ್ದರೂ ಧರಿಸಲು ಉತ್ತಮ ಚಪ್ಪಲಿಯಿರಲಿಲ್ಲ. ಚಿಕ್ಕ ಹುಡುಗನಿಗೆ ತರಗತಿಯೊಳಗೆ ಕುಳಿತುಕೊಳ್ಳಲು ಅವಕಾಶವಿರಲಿಲ್ಲ. ಆದರೂ, ಅವರು ಪರಿಶ್ರಮಪಟ್ಟರು ಎಂದು ಜೂಹಿ ವಿವರಿಸಿದ್ದಾರೆ.

ಹಳೆಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಂದ ಎರವಲು ಪಡೆದರು, ಗ್ರಾಮದ ಏಕೈಕ ದೀಪದ ಕಂಬದ ಕೆಳಗೆ ತಡರಾತ್ರಿಯವರೆಗೆ ಓದುತ್ತಿದ್ದರು. ತನ್ನ ಮೇಲ್ಜಾತಿಯ ಗೆಳೆಯರಿಂದ ದಬ್ಬಾಳಿಕೆ, ಮೇಲ್ವರ್ಗದ ಶಿಕ್ಷಕರಿಂದ ತಾರತಮ್ಯ ಮತ್ತು ತರಗತಿಯೊಳಗೆ ಕುಳಿತುಕೊಳ್ಳಲು ಅವಕಾಶವಿಲ್ಲದಿದ್ದರೂ, ಅವನ ದೃಢಸಂಕಲ್ಪ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿ ತನ್ನ ಎಲ್ಲಾ ಸಹಪಾಠಿಗಳನ್ನು ಮೀರಿಸಲು ಕಾರಣವಾಯಿತು ಎಂದು ಅವರು ನೆನಪಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...