alex Certify ಮುರುಘಾ ಶ್ರೀಗಳಿಗೆ ಸಂಕಷ್ಟ: ಜಡ್ಜ್ ಎದುರು ಬಾಲಕಿಯರ ಹೇಳಿಕೆ, ಬಂಧಿಸದಂತೆ ಜಾಮೀನಿಗೆ ಸ್ವಾಮೀಜಿ ಅರ್ಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುರುಘಾ ಶ್ರೀಗಳಿಗೆ ಸಂಕಷ್ಟ: ಜಡ್ಜ್ ಎದುರು ಬಾಲಕಿಯರ ಹೇಳಿಕೆ, ಬಂಧಿಸದಂತೆ ಜಾಮೀನಿಗೆ ಸ್ವಾಮೀಜಿ ಅರ್ಜಿ

ಚಿತ್ರದುರ್ಗ: ಮುರುಘಾ ಶ್ರೀ ವಿರುದ್ಧ ಪೋಕ್ಸೋ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಧ್ಯಾಹ್ನ ನ್ಯಾಯಾಧೀಶರ ಎದುರು ಬಾಲಕಿಯರು ಹಾಜರಾಗಿ ಹೇಳಿಕೆ ನೀಡಲಿದ್ದಾರೆ.

ಪೊಲೀಸರು ಈಗಾಗಲೇ ಬಾಲಕಿಯರ ವಿಚಾರಣೆ ನಡೆಸಿ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದ್ದು, ಸಂತ್ರಸ್ತ ಬಾಲಕಿಯರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುತ್ತದೆ. ಜಡ್ಜ್ ಎದುರು ಸಿ.ಆರ್.ಪಿ.ಸಿ. ಸೆಕ್ಷನ್ 164ರ ಅಡಿ ಹೇಳಿಕೆ ದಾಖಲಿಸಲಾಗುವುದು.

ಪೋಕ್ಸೋ ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಮುರುಘಾ ಶರಣರು ತಮ್ಮನ್ನು ಪೊಲೀಸರು ಬಂಧಿಸಿದಂತೆ ವಕೀಲರ ಮೂಲಕ ಚಿತ್ರದುರ್ಗ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಸೆಪ್ಟಂಬರ್ 1 ರಂದು ಅರ್ಜಿಯ ವಿಚಾರಣೆ ನಡೆಯಲಿದೆ. ಸೋಮವಾರ ಬಾಲಕಿಯರನ್ನು ಮಠಕ್ಕೆ ಕರೆತಂದು ಇದು ಸ್ಥಳ ಮಹಜರು ನಡೆಸಲಾಗಿದೆ. ಮಂಗಳವಾರವೂ ಮಧ್ಯಾಹ್ನದವರೆಗೂ ಮಹಜರು ನಡೆಯುವ ಸಾಧ್ಯತೆಯಿದ್ದು, ನಂತರ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...