alex Certify BIG BREAKING: ಮಂಡ್ಯ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಐವರ ಹತ್ಯೆ ಪ್ರಕರಣದ ಹಂತಕಿ ಅರೆಸ್ಟ್, ಸಂಬಂಧಿಯಿಂದಲೇ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಮಂಡ್ಯ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಐವರ ಹತ್ಯೆ ಪ್ರಕರಣದ ಹಂತಕಿ ಅರೆಸ್ಟ್, ಸಂಬಂಧಿಯಿಂದಲೇ ಘೋರ ಕೃತ್ಯ

ಮಂಡ್ಯದಲ್ಲಿ ಒಂದೇ ಕುಟುಂಬದ 5 ಜನರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಕರಿಂದಲೇ ಹತ್ಯೆಯಾಗಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

26 ವರ್ಷದ ಲಕ್ಷ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಮಹಿಳೆಯ ಗಂಡ ಗಂಗಾರಾಮ್ ಮೇಲೆ ಲಕ್ಷ್ಮಿಗೆ ಪ್ರೀತಿ ಇರುತ್ತದೆ. ಗಂಗಾರಾಮನನ್ನು ಪ್ರೀತಿಸುತ್ತಿದ್ದ ಲಕ್ಷ್ಮಿ ಆತನ ಸಂಬಂಧಿಯಾಗಿದ್ದು, ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದಳು.

ಆಂಧ್ರಪ್ರದೇಶದಲ್ಲಿ ವಾಸವಾಗಿದ್ದ ಹಂತಕಿ ಲಕ್ಷ್ಮಿ ಕಳೆದ ಎರಡು ತಿಂಗಳಿನಿಂದ ಮೈಸೂರಿನಲ್ಲಿ ವಾಸವಾಗಿದ್ದಳು. ಮಂಡ್ಯ ಜಿಲ್ಲೆ ಕೆ.ಆರ್.ಎಸ್. ಠಾಣೆ ಪೊಲೀಸರು ಐವರನ್ನು ಕೊಲೆ ಮಾಡಿ ಅಮಾಯಕಿಯಂತೆ ಅಳುತ್ತಿದ್ದ ಲಕ್ಷ್ಮಿಯನ್ನು ವಿಚಾರಣೆ ನಡೆಸಿದ್ದಾರೆ. ಜನರ ಮಧ್ಯೆ ಕುಳಿತು ದುಃಖಿಸುತ್ತ ನಾಟಕವಾಡಿದ್ದಳು. ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಐವರ ಮರ್ಡರ್ ಕೇಸ್ ಪೊಲೀಸರಿಗೆ ತಲೆನೋವಾಗಿತ್ತು.

ಗಂಗಾರಾಮ್ ಮೇಲೆ ಲಕ್ಷ್ಮಿಗೆ ಪ್ರೀತಿ ಇತ್ತು. ಈ ಸುಳಿವಿನ ಮೇಲೆ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾಳೆ. ಗಂಗಾರಾಮ್ ಮೇಲಿನ ಪ್ರೀತಿಯಿಂದ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ ಎನ್ನಲಾಗಿದ್ದು, ಆಕೆಯನ್ನು ಬಂಧಿಸಿದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...