alex Certify ಕರ್ತವ್ಯಕ್ಕೆ ತೆರಳುವಾಗಲೆ ಟ್ರಾಫಿಕ್​ ಜಾಂ: ರಿಕ್ಷಾದಿಂದ ಇಳಿದು ಸಮಸ್ಯೆ ಬಗೆಹರಿಸಿದ ಪೊಲೀಸ್​ಗೆ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ತವ್ಯಕ್ಕೆ ತೆರಳುವಾಗಲೆ ಟ್ರಾಫಿಕ್​ ಜಾಂ: ರಿಕ್ಷಾದಿಂದ ಇಳಿದು ಸಮಸ್ಯೆ ಬಗೆಹರಿಸಿದ ಪೊಲೀಸ್​ಗೆ ಶ್ಲಾಘನೆ

ಮುಂಬೈ: ಮುಂಬೈನ ಟ್ರಾಫಿಕ್ ಪೋಲೀಸ್ ಒಬ್ಬರು ಟ್ರಾಫಿಕ್ ಸಮಸ್ಯೆಯನ್ನು ನಿಭಾಯಿಸಲು ಪಟ್ಟ ಪ್ರಯತ್ನಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಟ್ರಾಫಿಕ್​ ಸಮಸ್ಯೆ ಉಂಟಾಗಿತ್ತು. ಈ ಪ್ರದೇಶ ತನಗೆ ಸೇರುವುದಲ್ಲ, ಏಕೆ ಸುಮ್ಮನೆ ಸಮಸ್ಯೆ ಬಗೆಹರಿಸುವುದು ಎಂದು ಅಂದುಕೊಳ್ಳದ ಈ ಪೊಲೀಸ್​, ರಿಕ್ಷಾದಿಂದ ಇಳಿದು ಟ್ರಾಫಿಕ್​ ಸಮಸ್ಯೆ ಬಗೆಹರಿಸಿದ್ದಾರೆ.

ಈ ಬಗ್ಗೆ ಸುದ್ದಿ ವೈರಲ್​ ಆಗಿದ್ದು, ಪೊಲೀಸ್​ ಶ್ಲಾಘನೆಗೆ ಒಳಗಾಗಿದ್ದಾರೆ. ಇವರ ಬಗ್ಗೆ ಸಾರ್ವಜನಿಕ ಮತ್ತು ಸರ್ಕಾರಿ ವ್ಯವಹಾರಗಳ ನಿರ್ದೇಶಕ ಪ್ರಭಾತ್ ಸಿನ್ಹಾ ಅವರು ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಟ್ವಿಟರ್​ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಿನ್ಹಾ ಅವರು, “@MumbaiPolice- ತನ್ನ ಕೆಲಸಕ್ಕೆ ಹೋಗುತ್ತಿರುವಾಗ ಈ ಜವಾಬ್ದಾರಿಯುತ ಪೊಲೀಸ್ ಆಟೋರಿಕ್ಷಾದಿಂದ ಹೊರಬಂದು ಟ್ರಾಫಿಕ್ ಅನ್ನು ನಿರ್ವಹಿಸಿ ಕರ್ತವ್ಯಕ್ಕೆ ಹೊರಟಿದ್ದಾರೆ @MTPHereToHelp ಕೀರ್ತಿ” ಎಂದು ಹೇಳಿದ್ದಾರೆ. ವೈರಲ್​ ಫೋಟೋದಲ್ಲಿ ಈ ಪೊಲೀಸ್​ ಟ್ರಾಫಿಕ್ ಅನ್ನು ತೆರವುಗೊಳಿಸುತ್ತಿರುವುದನ್ನು ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...