alex Certify ಮುಂಬೈ ಖಾಕಿ ಬ್ಯಾಂಡ್ ವಾದನಕ್ಕೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈ ಖಾಕಿ ಬ್ಯಾಂಡ್ ವಾದನಕ್ಕೆ ನೆಟ್ಟಿಗರು ಫಿದಾ

ಬಹುಶಃ ಮುಂಬೈ ಪೊಲೀಸ್, ಸಾಮಾಜಿಕ ಮಾಧ್ಯಮದಲ್ಲಿ ಹಲವರ ನೆಚ್ಚಿನದ್ದಾಗಿರಬಹುದು. ಸಾಮಾನ್ಯವಾಗಿ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಇಲಾಖೆಯು, ಸೃಜನಶೀಲತೆ, ಹಾಸ್ಯ, ಗಂಭೀರ ವಿಷಯಗಳ ಬಗ್ಗೆ ಪೋಸ್ಟ್ ಮಾಡುತ್ತೆ. ಆದರೀಗ ಖಾಕಿ ಮ್ಯೂಸಿಕ್ ಬ್ಯಾಂಡ್ ನೆಟ್ಟಿಗರ ಗಮನಸೆಳೆದಿದೆ.

ತಮ್ಮ ದೇಶಭಕ್ತಿಯನ್ನು ವ್ಯಕ್ತಪಡಿಸಲು ಹಾಡಿನ ಸಾಹಿತ್ಯವನ್ನು ಉಲ್ಲೇಖಿಸಿರುವ ಮ್ಯೂಸಿಕ್ ಬ್ಯಾಂಡ್ ವಿಡಿಯೊವನ್ನು ಮುಂಬೈ ಪೊಲೀಸ್ ಇಲಾಖೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಇದು 1986 ರ ಬಾಲಿವುಡ್ ಚಲನಚಿತ್ರ ಕರ್ಮದ ಪ್ರಸಿದ್ಧ ‘ಆಯೆ ವತನ್ ತೇರೆ ಲಿಯೆ’ ಹಾಡಿನ ಮ್ಯೂಸಿಕ್ ಆಗಿದೆ. ಕ್ಲಿಪ್ ಮೂಲ ಹಾಡಿನ ದೃಶ್ಯಗಳೊಂದಿಗೆ ಬ್ಯಾಂಡ್‌ನ ಕಾರ್ಯಕ್ಷಮತೆಯನ್ನು ತೋರಿಸುತ್ತದೆ.

ಅತ್ಯಪರೂಪದ ಘಟನೆ: ಒಂದೇ ಕರುಳಬಳ್ಳಿ ಹಂಚಿಕೊಂಡು ಜನಿಸಿದ ತ್ರಿವಳಿಗಳು

ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು 6.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಪೊಲೀಸ್ ಬ್ಯಾಂಡ್ ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಮುಂಬೈ ಪೊಲೀಸ್ ರಾಕ್ ನಾವು ನಿಮ್ಮನ್ನು ಅಭಿನಂದಿಸುತ್ತೇವೆ ಮತ್ತು ಗೌರವಿಸುತ್ತೇವೆ” ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...