alex Certify NCB ಬಳಿ ವಿಶೇಷ ಕೋರಿಕೆ ಇಟ್ಟ ಶಾರೂಕ್​ ಪುತ್ರ ಆರ್ಯನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

NCB ಬಳಿ ವಿಶೇಷ ಕೋರಿಕೆ ಇಟ್ಟ ಶಾರೂಕ್​ ಪುತ್ರ ಆರ್ಯನ್

ಬಾಲಿವುಡ್​ ನಟ ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​ ಡ್ರಗ್​ ಸೇವನೆ ಪ್ರಕರಣದ ಅಡಿಯಲ್ಲಿ ಎನ್​ಸಿಬಿ ವಶದಲ್ಲಿದ್ದಾನೆ. ಗುರುವಾರದರವರೆಗೂ ಪೊಲೀಸರ ವಶದಲ್ಲೇ ಇರಲಿರುವ ಆರ್ಯನ್​, ಎನ್​ಸಿಬಿ ಬಳಿ ಬೇಡಿಕೆಯೊಂದನ್ನು ಇಟ್ಟಿದ್ದಾನೆ ಎನ್ನಲಾಗಿದೆ.

ಹೌದು..! ಮಾದಕ ದ್ರವ್ಯ ಸೇವನೆ ಆರೋಪ ಎದುರಿಸುತ್ತಿರುವ ಆರ್ಯನ್​ ಎನ್​ಸಿಬಿ ಪೊಲೀಸರ ಬಳಿ ವಿಜ್ಞಾನ ಪುಸ್ತಕಕ್ಕೆ ಬೇಡಿಕೆ ಇಟ್ಟಿದ್ದಾನೆ. ಪೊಲೀಸರು ಆರ್ಯನ್​ ಕೋರಿಕೆಯಂತೆಯೇ ಪುಸ್ತಕವನ್ನು ಒದಗಿಸಿದ್ದಾರೆ ಎನ್ನಲಾಗಿದೆ.

ಅಡಿಕೆ ಕಳ್ಳತನಕ್ಕೆ ಕಡಿವಾಣ ಹಾಕಲು ಶಿವಮೊಗ್ಗದಲ್ಲಿ ಆರಂಭವಾಯ್ತು ಹೆಲ್ಪ್ ಲೈನ್

ಸ್ನೇಹಿತರ ಜೊತೆಯಲ್ಲಿ ಬಂಧಿತನಾಗಿರುವ ಆರ್ಯನ್​ ಎನ್​ಸಿಬಿ ನೀಡುವ ಆಹಾರವನ್ನೇ ಮೂರು ಹೊತ್ತು ಸೇವಿಸುತ್ತಿದ್ದಾನೆ. ಮನೆಯಿಂದ ಆಹಾರವನ್ನು ಕಳುಹಿಸಲು ಅನುಮತಿ ನೀಡಲಾಗಿಲ್ಲ.

ಬಾಲಿವುಡ್​ ಪಾದಾರ್ಪಣೆ ಕುರಿತು ಅಚ್ಚರಿ ಹೇಳಿಕೆ ನೀಡಿದ ʼಕ್ಯಾಪ್ಟನ್​ ಕೂಲ್ʼ

ಈ ನಡುವೆ ತನಿಖೆಯ ಭಾಗವಾಗಿ ಆರ್ಯನ್​ ಖಾನ್​ ಹಾಗೂ ಇತರೆ ಬಂಧಿತರ ಮೊಬೈಲ್​ ಫೋನ್​ಗಳಲ್ಲಿ ನಡೆದ ಚಾಟಿಂಗ್​ ಸಂಭಾಷಣೆಗಳ ಮೇಲೂ ಎನ್​ಸಿಬಿ ಕಣ್ಣಿಟ್ಟಿದೆ. ಆರೋಪಿಗಳ ಚಾಟ್​ಗಳು ಹಾಗೂ ಕ್ರೂಸ್​ನಲ್ಲಿ ಸಿಕ್ಕ ಫೋಟೋಗಳ ಪ್ರಕಾರ ಈ ಪ್ರಕರಣಕ್ಕೂ ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲಕ್ಕೂ ನಂಟಿದೆ ಎಂಬ ಮಾಹಿತಿ ಮೇಲ್ನೋಟಕ್ಕೆ ಲಭ್ಯವಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...