alex Certify ಅಡಿಕೆ ಕಳ್ಳತನಕ್ಕೆ ಕಡಿವಾಣ ಹಾಕಲು ಶಿವಮೊಗ್ಗದಲ್ಲಿ ಆರಂಭವಾಯ್ತು ಹೆಲ್ಪ್ ಲೈನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡಿಕೆ ಕಳ್ಳತನಕ್ಕೆ ಕಡಿವಾಣ ಹಾಕಲು ಶಿವಮೊಗ್ಗದಲ್ಲಿ ಆರಂಭವಾಯ್ತು ಹೆಲ್ಪ್ ಲೈನ್

ಶಿವಮೊಗ್ಗ; ಅಡಿಕೆ ಕಳ್ಳತನ ತಡೆಗಟ್ಟುವ ಬಗ್ಗೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಹಲವು ಸಲಹೆಗಳನ್ನು ನೀಡಿದೆ.

ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅಡಕೆ ಬೆಳೆ ಕಳ್ಳತನವಾಗುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುಂಜಾಗೃತಾ ಕ್ರಮಗಳ ಬಗ್ಗೆ ಪೊಲಿಸ್ ಇಲಾಖೆ ಕೆಲ ಮಾರ್ಗೋಪಾಯಗಳನ್ನು ಸೂಚಿಸಿದೆ.

ಹಬ್ಬದ ಋತುವಿನಲ್ಲಿ ದೇಹ‌ ತೂಕ ಹೆಚ್ಚದಂತೆ ನೋಡಿಕೊಳ್ಳಲು ಇಲ್ಲಿದೆ ಟಿಪ್ಸ್

* ಅಡಿಕೆಯನ್ನು ತೆರೆದ ಪ್ರದೇಶದಲ್ಲಿ ಸಂಗ್ರಹಿಸದೇ, ಗೋಡೌನ್ / ಸಂಗ್ರಹಣಾ ಕೊಠಡಿಗಳಲ್ಲಿ ಶೇಖರಿಸುವುದು

* ಅಡಿಕೆ ಸಂಗ್ರಹಿಸುವ ಗೋಡೌನ್ / ಕೊಠಡಿಗಳಿಗೆ ಸೂಕ್ತ ಬೀಗದ ವ್ಯವಸ್ಥೆ

* ಅಡಿಕೆ ಸಂಗ್ರಹಿಸುವ ಗೋಡೌನ್ ಅಥವಾ ಸಂಗ್ರಹ ಕೊಠಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಸಿ ಟಿವಿ ಕ್ಯಾಮರಾ

* ಅಡಿಕೆ ಸಂಗ್ರಹ ಹಾಗೂ ಒಣಗಿಸುವ ಸ್ಥಳಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ

* ಗೋಡೌನ್ ಪ್ರದೇಶದಲ್ಲಿ ವಾಹನಗಳು ಸುಲಭವಾಗಿ ಸ್ಥಳಕ್ಕೆ ಆಗಮಿಸದಂತೆ ಗೇಟ್ ಗಳ ಅಳವಡಿಕೆ

* ಗೋಡೌನ್ ಅಥವಾ ಸಂಗ್ರಹಣಾ ಕೊಠಡಿಯಲ್ಲಿ ಒಂದು ವೇಳೆ ಅಡಿಕೆ ಕಳ್ಳತನಕ್ಕೆ ಯತ್ನಿಸಿದರೆ ಎಚ್ಚರಿಸಲು ಅಲಾರಾಮ್ ವ್ಯವಸ್ಥೆ

BIG BREAKING: LPG ಗ್ರಾಹಕರಿಗೆ ಮತ್ತೆ ಬಿಗ್ ಶಾಕ್, ಗ್ಯಾಸ್ ಸಿಲಿಂಡರ್ ದರ ಹೆಚ್ಚಳ

ಅನುಮಾನಾಸ್ಪದ ವ್ಯಕ್ತಿಗಳ ಅಥವಾ ವಾಹನಗಳ ಓಡಾಟ ಕಂಡುಬಂದಲ್ಲಿ ಕುಡಲೇ ERSS 112 ಸಹಾಯವಾಣಿ/ ಪೊಲೀಸ್ ನಿಯಂತ್ರಣ ಕೊಠಡಿಯ ಮೊಬೈಲ್ ಸಂಖ್ಯೆ 9480803300ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಇಲಾಖೆ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...