alex Certify ಬಾಲಿವುಡ್​ ಪಾದಾರ್ಪಣೆ ಕುರಿತು ಅಚ್ಚರಿ ಹೇಳಿಕೆ ನೀಡಿದ ʼಕ್ಯಾಪ್ಟನ್​ ಕೂಲ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್​ ಪಾದಾರ್ಪಣೆ ಕುರಿತು ಅಚ್ಚರಿ ಹೇಳಿಕೆ ನೀಡಿದ ʼಕ್ಯಾಪ್ಟನ್​ ಕೂಲ್ʼ

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಿದ ಬಳಿಕ ಕ್ಯಾಪ್ಟನ್​ ಕೂಲ್​ ಮಹೇಂದ್ರ ಸಿಂಗ್​ ಧೋನಿ ಐಪಿಎಲ್​ ಪಂದ್ಯಾವಳಿಗಳಲ್ಲಿ ಕಾಣಿಸಿಕೊಳ್ಳುವುದನ್ನು ಮುಂದುವರಿಸಿದ್ದಾರೆ.

ಆದರೆ ನಿನ್ನೆಯಷ್ಟೇ ಐಪಿಎಲ್​ ಕ್ರಿಕೆಟ್​ ಜೀವನಕ್ಕೂ ವಿದಾಯ ಘೋಷಿಸುವ ಬಗ್ಗೆ ಸುಳಿವು ನೀಡಿದ್ದು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಅಭಿಮಾನಿಗಳಿಗೆ ಆಘಾತ ತಂದಿದೆ. ಅನೇಕ ಆಟಗಾರರು ಕ್ರಿಕೆಟ್​ ಜೀವನಕ್ಕೆ ನಿವೃತ್ತಿ ಘೋಷಿಸಿದ ಬಳಿಕ ಬಾಲಿವುಡ್​ ಕಡೆಗೆ ಮುಖ ಮಾಡಿದ್ದು ಇದೆ. ಇದೀಗ ಮಹೇಂದ್ರ ಸಿಂಗ್​ ಧೋನಿ ಕೂಡ ಇದೇ ಹಾದಿ ತುಳಿಯುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

IPL: ಕೊನೆಯ ಪಂದ್ಯದ ಸುಳಿವು ನೀಡಿದ ಎಂ.ಎಸ್. ಧೋನಿ, ಚೆನ್ನೈನಲ್ಲಿ ವಿದಾಯ ಪಂದ್ಯವಾಡುವ ಇಂಗಿತ

ಆದರೆ ಈ ಪ್ರಶ್ನೆಗೆ ಉತ್ತರ ನೀಡಿರುವ ಕ್ಯಾಪ್ಟನ್​​ ಕೂಲ್​ ಧೋನಿ, ಕ್ರಿಕೆಟ್​ ಜೀವನಕ್ಕೆ ಸಂಪೂರ್ಣವಾಗಿ ವಿದಾಯ ಘೋಷಿಸಿದ ಬಳಿಕ ತಾವು ನಟನೆಯತ್ತ ವಾಲುವುದಿಲ್ಲ ಎಂದು ಹೇಳಿದ್ದಾರೆ. ನಟನೆಯು ಸುಲಭವಾದ ಕೆಲಸವಲ್ಲ. ಹೀಗಾಗಿ ನಾನು ಕ್ರಿಕೆಟ್​ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯವನ್ನೇ ಮಾಡುತ್ತೇನೆ ಎಂದು ಹೇಳಿದ್ದಾರೆ.

ಬಾಲಿವುಡ್​ ನನಗೆ ಸರಿಹೊಂದುವ ಸ್ಥಳವಲ್ಲ. ನಾನು ಜಾಹಿರಾತುಗಳಲ್ಲಿ ನಟಿಸುತ್ತೇನೆ. ಅದಷ್ಟಕ್ಕೇ ನಾನು ಖುಷಿಯಾಗಿದ್ದೇನೆ. ಆದರೆ ಸಿನಿಮಾಗಳಲ್ಲಿ ನಟಿಸುವುದು ನನಗೆ ನಿಜಕ್ಕೂ ಕಷ್ಟದ ಕೆಲಸವಾಗಿದೆ. ನಾನು ಕ್ರಿಕೆಟ್​ ಜೀವನಕ್ಕೆ ಸೀಮಿತವಾಗಿದ್ದೇನೆ. ಜಾಹಿರಾತುಗಳಲ್ಲಿ ನಟಿಸುವುದನ್ನು ಬಿಟ್ಟು ಅದಕ್ಕೂ ಹೆಚ್ಚಿನ ಅವಧಿಯ ನಟನೆ ನನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ.

IPL 2021: ಗೆಲುವು ಸಂಭ್ರಮಿಸಿದ ದೆಹಲಿ ಆಟಗಾರರ ವಿಡಿಯೋ ವೈರಲ್

ಕೆಲ ಸಮಯದ ಹಿಂದಷ್ಟೇ ಹರ್ಭಜನ್​ ಸಿಂಗ್​ ತಮಿಳು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ಅದೇ ರೀತಿ ಕ್ರಿಕೆಟಿಗರಾದ ಬ್ರೆಟ್​ ಲೀ, ಅಜಯ್​ ಜಡೇಜಾ, ವಿನೋದ್​ ಕಾಂಬ್ಳಿ ಸೇರಿದಂತೆ ಅನೇಕರು ನಟನಾ ಲೋಕಕ್ಕೆ ಕಾಲಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...