alex Certify ವೈದ್ಯೆಯ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿದ ಕಾಂಪೌಂಡರ್​..! ಹಣಕ್ಕೆ ಬೇಡಿಕೆ ಇಡಲು ಹೋಗಿ ಈಗ ಪೊಲೀಸರ​ ಅತಿಥಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈದ್ಯೆಯ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿದ ಕಾಂಪೌಂಡರ್​..! ಹಣಕ್ಕೆ ಬೇಡಿಕೆ ಇಡಲು ಹೋಗಿ ಈಗ ಪೊಲೀಸರ​ ಅತಿಥಿ

ಮಹಿಳೆ ಹಾಗೂ ಆಕೆಯ ಸ್ನೇಹಿತ ಒಂದಾಗಿ ಮಹಿಳಾ ವೈದ್ಯೆ ಹಾಗೂ ಆಕೆಯ ಸ್ನೇಹಿತನ ಖಾಸಗಿ ದೃಶ್ಯದ ವಿಡಿಯೋವನ್ನು ರೆಕಾರ್ಡ್​ ಮಾಡಿ ಬಳಿಕ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ ಘಟನೆಯು ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ವರದಿಯಾಗಿದೆ.

ಆರೋಪಿ ಮಹಿಳೆ ಹಾಗೂ ಆತನ ಸ್ನೇಹಿತನನ್ನು ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆ ಕ್ಲಿನಿಕ್​ನಲ್ಲಿ ಸ್ಪೈ ಕ್ಯಾಮರಾ ಇರಿಸಿದ್ದ ಆರೋಪಿಗಳು ಈ ದೃಶ್ಯಗಳನ್ನು ಚಿತ್ರೀಕರಿಸಿದ್ದರು ಎನ್ನಲಾಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋವನ್ನು ಹರಿಬಿಡುವುದಾಗಿ ಆರೋಪಿಗಳು ವೈದ್ಯೆಯನ್ನು ಬೆದರಿಸಿದ್ದರು ಎನ್ನಲಾಗಿದೆ. ಕುಟುಂಬಸ್ಥರಿಗೂ ಈ ವಿಡಿಯೋಗಳನ್ನು ಶೇರ್​ ಮಾಡೋದಾಗಿ ಹೆದರಿಸಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಮಹಿಳಾ ವೈದ್ಯೆಗೆ ಈಗಾಗಲೇ ಮದುವೆಯಾಗಿದ್ದು ಓಮನ್​ನಿಂದ ಮುಂಬೈಗೆ ಬಂದಿದ್ದ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಹಿಳಾ ವೈದ್ಯೆ ನಡೆಸುತ್ತಿದ್ದ ಕ್ಲಿನಿಕ್​ನಲ್ಲಿ ಕಾಂಪೌಡರ್​ ಆಗಿ ಆರೋಪಿ ಮಹಿಳೆ ಕೆಲಸ ಮಾಡುತ್ತಿದ್ದಳು. ಈಕೆಗೆ ಮಹಿಳಾ ವೈದ್ಯೆಯ ಅಕ್ರಮ ಸಂಬಂಧದ ಬಗ್ಗೆ ಮೊದಲೇ ಮಾಹಿತಿ ಇತ್ತು. ಹೀಗಾಗಿ ತನ್ನ ಸ್ನೇಹಿತನ ಸಹಾಯದಿಂದ ಈಕೆ ವೈದ್ಯೆಯ ಕೋಣೆಯಲ್ಲಿ ಸ್ಪೈ ಕ್ಯಾಮರಾ ಇರಿಸಿದ್ದಳು ಎನ್ನಲಾಗಿದೆ.

ಕೋಣೆಯಲ್ಲಿ ಮಹಿಳಾ ವೈದ್ಯೆ ಹಾಗೂ ಆಕೆಯ ಸ್ನೇಹಿತ ಕಳೆದಿದ್ದ ಖಾಸಗಿ ಕ್ಷಣಗಳು ಸ್ಪೈ ಕ್ಯಾಮರಾದಲ್ಲಿ ರೆಕಾರ್ಡ್​ ಆಗಿತ್ತು. ಈ ವಿಡಿಯೋವನ್ನು ಕಾಂಪೌಂಡರ್​ ತನ್ನ ಸ್ನೇಹಿತನಿಗೆ ನೀಡಿದ್ದಳು. ಇದಾದ ಬಳಿಕ ಮಹಿಳಾ ವೈದ್ಯೆಗೆ ಕರೆ ಮಾಡಿ ಆತ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಮಹಿಳಾ ವೈದ್ಯೆಗೆ ಆರೋಪಿಗಳು ನಾಲ್ಕು ದಿನಗಳ ಕಾಲ ಬೆದರಿಕೆ ಹಾಕಿದ್ದಾರೆ. ಬಳಿಕ ಮಹಿಳಾ ವೈದ್ಯೆ ಪೊಲೀಸ್​ ಠಾಣೆಯಲ್ಲಿ ಘಟನೆ ಸಂಬಂಧ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ನಂತರ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...