alex Certify BIG NEWS: ದೇಶದ ಮೊದಲ ಬುಲೆಟ್​ ರೈಲು ಪೈಲೆಟ್ ​ಗಳಿಗೆ ಜಪಾನಿ ಸಿಮ್ಯುಲೇಟರ್​ ಮೂಲಕ ತರಬೇತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇಶದ ಮೊದಲ ಬುಲೆಟ್​ ರೈಲು ಪೈಲೆಟ್ ​ಗಳಿಗೆ ಜಪಾನಿ ಸಿಮ್ಯುಲೇಟರ್​ ಮೂಲಕ ತರಬೇತಿ

ದೇಶದ ಮೊದಲ ಬುಲೆಟ್​ ರೈಲು ಯೋಜನೆ ಅನುಷ್ಠಾನಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಬುಲೆಟ್​ ರೈಲು ಓಡಾಟಕ್ಕೆ ಅಗತ್ಯವಾದ ಮೂಲ ಸೌಕರ್ಯದ ಕೆಲಸ ಒಂದು ಕಡೆ ನಡೆದರೆ, ಈ ರೈಲನ್ನು ಮುನ್ನೆಡೆಸುವ ಪೈಲೆಟ್​ಗಳಿಗೆ ತರಬೇತಿಯೂ ಆರಂಭವಾಗಿದೆ.

ಭಾರತದ ಬುಲೆಟ್​ ರೈಲಿನ ಚಾಲಕರು ವೇಗದ ರೈಲುಗಳನ್ನು ಹೇಗೆ ನಿರ್ವಹಿಸಬೇಕೆಂದು ತಿಳಿಯಲು ಜಪಾನ್​ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಸಿಮ್ಯುಲೇಟರ್​ಗಳನ್ನು ಬಳಸಲಾಗುತ್ತಿದೆ.

ನ್ಯಾಷನಲ್​ ಹೈ-ಸ್ಪೀಡ್​ ರೈಲ್​ ಕಾರ್ಪೊರೇಷನ್​ ಲಿಮಿಟೆಡ್​ ಅಧಿಕಾರಿಗಳ ಪ್ರಕಾರ, ತರಬೇತಿ ಸಿಮ್ಯುಲೇಟರ್​ಗಳು ಚಾಲಕರು, ಕಂಡಕ್ಟರ್​, ಬೋಧಕರು ಮತ್ತು ರೈಲು/ರೋಲಿಂಗ್​ ಸ್ಟಾಕ್​ ನಿರ್ವಹಣಾ ಕೆಲಸಗಾರರಿಗೆ ಹೈ-ಸ್ಪೀಡ್​ ರೈಲು ಚಾಲನಾ ಥಿಯರಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಸಿಮ್ಯುಲೇಟರ್​ಗಳಲ್ಲಿ, ಒಬ್ಬ ಚಾಲಕ ಮತ್ತು ಕಂಡಕ್ಟರ್​ಗೆ ತರಬೇತಿಯನ್ನು ನಡೆಸುವುದು ಸೇರಿದಂತೆ ಗುಂಪು ತರಬೇತಿಯನ್ನು ಸಹ ನಡೆಸುವುದು ಕಾರ್ಯಸಾಧ್ಯವಾಗಲಿದೆ. ಎನ್​ಎಚ್​ಎಸ್​ಆರ್​ಸಿಎಲ್​ ಗುಜರಾತ್​ನ ವಡೋದರದಲ್ಲಿರುವ ಮುಂಬೈ& ಅಹಮದಾಬಾದ್​ ಹೈ-ಸ್ಪೀಡ್​ ರೈಲ್​ ಕಾರಿಡಾರ್​ನಲ್ಲಿ ತರಬೇತಿ ಉದ್ದೇಶಕ್ಕಾಗಿ ಎಚ್​ಎಸ್​ಆರ್​ ರೈಲಿನ ತರಬೇತಿ ಸಿಮ್ಯುಲೇಟರ್​ಗಳ ವಿನ್ಯಾಸ, ಉತ್ಪಾದನೆ, ಪೂರೈಕೆ ಮತ್ತು ಕಾರ್ಯಾರಂಭಕ್ಕಾಗಿ ಸ್ವೀಕಾರ ಪತ್ರವನ್ನು ನೀಡಿದೆ.
ತರಬೇತಿ ಉದ್ದೇಶಕ್ಕಾಗಿ ಮಾದರಿ ಟ್ರಾಕ್​ ಈಗಾಗಲೇ ಸ್ಥಾಪಿಸಲಾಗಿದೆ. 201.21 ಕೋಟಿ ರೂ. ವೆಚ್ಚದಲ್ಲಿ ಜಪಾನ್​ನ ಕಂಪನಿಗೆ ಪ್ಯಾಕೇಜ್​ ನೀಡಲಾಗಿದೆ. ಸಿಮ್ಯುಲೇಟರ್​ ಪೂರೈಕೆಯ ಅವಧಿಯು ಒಪ್ಪಂದದ ಪ್ರಾರಂಭದಿಂದ 28 ತಿಂಗಳುಗಳಾಗಿರುತ್ತವೆ.

ಈ ಪ್ಯಾಕೇಜ್​ನ ವ್ಯಾಪ್ತಿಯಡಿಯಲ್ಲಿ ವಡೋದರಾದ ತರಬೇತಿ ಸಂಸ್ಥೆಯಲ್ಲಿ ಸಿಬ್ಬಂದಿ ತರಬೇತಿಗಾಗಿ ರೈಲು ಸೆಟ್​ ಸಿಮ್ಯುಲೇಟರ್​ ಮತ್ತು ತರಗತಿಯ ಮಾದರಿಯ ಎರಡು ರೀತಿಯ ಸಿಮ್ಯುಲೇಟರ್​ಗಳನ್ನು ಅಳವಡಿಸಬೇಕು, ಇದನ್ನು ಹತ್ತು ಪ್ರಶಿಕ್ಷಣಾಥಿರ್ಗಳು ಮತ್ತು ಬೋಧಕರು ಬಳಸಬಹುದಾಗಿದೆ.

ಸರ್ಕಾರದ ಮಂಜೂರಾತಿ ಮತ್ತು ಭೂಸ್ವಾಧಿನ ವಿಳಂಬದಿಂದ ಮಹಾರಾಷ್ಟ್ರದಲ್ಲಿ ನೆನೆಗುದಿಗೆ ಬಿದ್ದಿದ್ದ ಬುಲೆಟ್​ ರೈಲು ಯೋಜನೆ ಇದೀಗ ಏಕನಾಥ್​ ಶಿಂಧೆ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದರೊಂದಿಗೆ ವೇಗ ಪಡೆದುಕೊಂಡಿದೆ. ಬಹುತೇಕ ಎಲ್ಲಾ ಬಾಕಿ ಉಳಿದಿರುವ ತಡೆ ನಿವಾರಣೆಯಾಗುತ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...