alex Certify Shocking: ಕಠಿಣ ನಿರ್ಬಂಧದ ನಡುವೆಯೂ ಮದ್ಯ ಸೇವಿಸಿ ಸಿಕ್ಕಿಬಿದ್ದಿದ್ದಾರೆ ಪೈಲಟ್ ಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಕಠಿಣ ನಿರ್ಬಂಧದ ನಡುವೆಯೂ ಮದ್ಯ ಸೇವಿಸಿ ಸಿಕ್ಕಿಬಿದ್ದಿದ್ದಾರೆ ಪೈಲಟ್ ಗಳು

ಈ ವರ್ಷದ ಜನವರಿ 1 ರಿಂದ ಏಪ್ರಿಲ್ 30 ರ ವರೆಗಿನ ಅವಧಿಯಲ್ಲಿ ಮದ್ಯಪಾನ ಪತ್ತೆ ತಪಾಸಣೆಯಲ್ಲಿ ಎರಡು ಬಾರಿ ವಿಫಲರಾದ ದೇಶದ 9 ಪೈಲಟ್ ಗಳು ಮತ್ತು 32 ಮಂದಿ ವಿಮಾನ ಸಿಬ್ಬಂದಿ ಅನುತ್ತೀರ್ಣರಾಗಿದ್ದಾರೆ.

ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ವಿಮಾನ ಪ್ರಯಾಣ ಆರಂಭಕ್ಕೂ ಮುನ್ನ ಪೈಲಟ್ ಗಳು ಮತ್ತು ಸಿಬ್ಬಂದಿಗೆ ಮದ್ಯಪಾನ ಪತ್ತೆಗಾಗಿ ಈ ತಪಾಸಣೆಯನ್ನು ನಡೆಸಿದೆ. ಅಂದರೆ, ಈ ತಪಾಸಣೆ ವೇಳೆ ಸಿಬ್ಬಂದಿ ಮದ್ಯಪಾನ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಇಬ್ಬರು ಪೈಲಟ್ ಗಳು ಮತ್ತು ಇಬ್ಬರು ಕ್ಯಾಬಿನ್ ಸಿಬ್ಬಂದಿಯನ್ನು ಮೂರು ವರ್ಷಗಳವರೆಗೆ ಅಮಾನತು ಮಾಡಲಾಗಿದೆ. ಇನ್ನುಳಿದ 7 ಪೈಲಟ್ ಗಳು ಮತ್ತು 30 ಕ್ಯಾಬಿನ್ ಸಿಬ್ಬಂದಿ ಇದೇ ಮೊದಲ ಬಾರಿಗೆ ಬ್ರೆತ್ ಅನಾಲೈಸರ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದ ಕಾರಣದಿಂದ ಅವರನ್ನು ಮೂರು ತಿಂಗಳ ಕಾಲ ಅಮಾನತು ಮಾಡಲಾಗಿದೆ ಎಂದು ಡಿಜಿಸಿಎ ತಿಳಿಸಿದೆ.

ಡಿಜಿಸಿಎ ಪ್ರಕಾರ, ಇಂಡಿಗೋದ 4 ಪೈಲಟ್ ಗಳು ಮತ್ತು 10 ಕ್ಯಾಬಿನ್ ಸಿಬ್ಬಂದಿ, ಗೋ ಫಸ್ಟ್ ನ ಓರ್ವ ಪೈಲಟ್, ಐವರು ಕ್ಯಾಬಿನ್ ಸಿಬ್ಬಂದಿ, ಸ್ಪೈಸ್ ಜೆಟ್ ನ ಓರ್ವ ಪೈಲಟ್ ಮತ್ತು ಆರು ಮಂದಿ ಕ್ಯಾಬಿನ್ ಸಿಬ್ಬಂದಿ, ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಓರ್ವ ಪೈಲಟ್ ಮತ್ತು ಏರ್ ಏಷ್ಯಾದ ನಾಲ್ವರು ಕ್ಯಾಬಿನ್ ಸಿಬ್ಬಂದಿ ಆಲ್ಕೋಹಾಲ್ ಪರೀಕ್ಷೆಗಳಲ್ಲಿ ವಿಫಲರಾಗಿದ್ದಾರೆ.

ವಿಸ್ತಾರದ ಓರ್ವ ಪೈಲಟ್ ಮತ್ತು ಇಬ್ಬರು ಕ್ಯಾಬಿನ್ ಸಿಬ್ಬಂದಿ, ಅಲಾಯನ್ಸ್ ಏರ್ ನ ಓರ್ವ ಪೈಲಟ್ ಮತ್ತು ಏರ್ ಇಂಡಿಯಾದ ಐವರು ಕ್ಯಾಬಿನ್ ಸಿಬ್ಬಂದಿಯೂ ಈ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಎಲ್ಲಾ ವಿಮಾನಗಳ ಸಿಬ್ಬಂದಿಯು ಪ್ರಯಾಣ ಆರಂಭಿಸುವ ಮುನ್ನ ಕಡ್ಡಾಯವಾಗಿ ಆಲ್ಕೋಹಾಲ್ ಟೆಸ್ಟ್ ಗೆ ಒಳಗಾಗಬೇಕೆಂದು ಡಿಜಿಸಿಎ ಕಟ್ಟಪ್ಪಣೆ ಹೊರಡಿಸಿತ್ತು.

ಸಾಂಕ್ರಾಮಿಕದ ಅವಧಿಗೆ ಮುನ್ನ ಎಲ್ಲಾ ಸಿಬ್ಬಂದಿ ಆಲ್ಕೋಹಾಲ್ ಟೆಸ್ಟ್ ಗೆ ಒಳಗಾಗಬೇಕಿತ್ತು. ಆದರೆ, ನಂತರ ಕೆಲವು ತಿಂಗಳವರೆಗೆ ಈ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿತ್ತು. ಸಾಂಕ್ರಾಮಿಕ ಪ್ರಮಾಣ ಸುಧಾರಣೆಯಾದ ನಂತರ ಸೀಮಿತ ಪ್ರಮಾಣದಲ್ಲಿ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿತ್ತು. ಆದರೆ, ಕಳೆದ ಹಲವು ತಿಂಗಳಿಂದ ಡಿಜಿಸಿಎ ಎಲ್ಲಾ ಸಿಬ್ಬಂದಿಗೂ ಪರೀಕ್ಷೆ ನಡೆಸುವುದನ್ನು ಕಡ್ಡಾಯಗೊಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...