alex Certify ರಾಧಿಕಾ ಮರ್ಚೆಂಟ್ ಅರಂಗೇಟ್ರಂಗೆ ಮುಕೇಶ್, ನೀತಾ ಅಂಬಾನಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಧಿಕಾ ಮರ್ಚೆಂಟ್ ಅರಂಗೇಟ್ರಂಗೆ ಮುಕೇಶ್, ನೀತಾ ಅಂಬಾನಿ ಆಹ್ವಾನ

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಜೋಡಿಯ ಬಗ್ಗೆ ಹೊಸದೊಂದು ಸುದ್ದಿಬಂದಿದೆ. ಎನ್‌ಕೋರ್ ಹೆಲ್ತ್ ಕೇರ‌ ಉಪಾಧ್ಯಕ್ಷ ಮತ್ತು ಸಿಇಒ ವೀರೇನ್ ಮರ್ಚೆಂಟ್ ಪುತ್ರಿಯಾದ ರಾಧಿಕಾ ಮರ್ಚೆಂಟ್ ನೃತ್ಯಪಟುವೂ ಹೌದು. ಈಗವರು ಅರಂಗೇಟ್ರಂ (ರಂಗ ಪ್ರವೇಶ) ಸಿದ್ಧತೆ ನಡೆಸಿದ್ದಾರೆ.

ಆಕೆ ಶಾಸ್ತ್ರೀಯ ನೃತ್ಯ ತರಬೇತಿ ಪಡೆದಿದ್ದು, ವೇದಿಕೆಯಲ್ಲಿ ಪ್ರದರ್ಶನ ನೀಡಲು ಸಿದ್ಧರಾಗುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ತಮ್ಮ ಭಾವಿ ಅತ್ತೆ, ಮಾವನವರಿಗೂ ಆಹ್ವಾನ ನೀಡಿದ್ದಾರೆ.

ಅರಂಗೇಟ್ರಂನ ಆಹ್ವಾನ ಪತ್ರಿಕೆಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಶ್ರೀ ನಿಭಾ ಆರ್ಟ್ಸ್‌ನ ಗುರು ಭಾವನಾ ಠಾಕರ್ ಶಿಷ್ಯೆ ರಾಧಿಕಾ ಮರ್ಚೆಂಟ್ ಅರ್ರಂಗೇಟ್ರಂಗೆ ನೀತಾ ಹಾಗೂ ಮುಖೇಶ್ ಅಂಬಾನಿ ಶೈಲಾ ಹಾಗೂ ವೀರೇನ್ ಮರ್ಚೆಂಟ್ ಅವರಿಂದ ಸ್ವಾಗತ ಎಂದು ಆಹ್ವಾನ ಪತ್ರಿಕೆಯಲ್ಲಿದೆ.

ಜೂನ್ 5 ರಂದು ಜಿಯೋ ವರ್ಲ್ಡ್ ಸೆಂಟರ್‌ನಲ್ಲಿರುವ ದಿ ಗ್ರ್ಯಾಂಡ್ ಥಿಯೇಟರ್‌ನಲ್ಲಿ ಅರಂಗೇಟ್ರಂ ನಡೆಯಲಿದೆ.

ಆಮಂತ್ರಣದಲ್ಲಿ, ಅನಂತ್, ಅಂಜಲಿ- ಅಮನ್, ಇಶಾ- ಆನಂದ್, ಶ್ಲೋಕಾ- ಆಕಾಶ್ ಹೆಸರೂ ಕೂಡ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...