alex Certify ನೆರೆಮನೆಯಾಕೆ ಜೊತೆ ಲವ್ವಿ- ಡವ್ವಿ….! ರಾತ್ರೋರಾತ್ರಿ ಪತ್ನಿಯನ್ನು ಮನೆಯಿಂದ ಹೊರಗಟ್ಟಿದ ಪಾಪಿ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆರೆಮನೆಯಾಕೆ ಜೊತೆ ಲವ್ವಿ- ಡವ್ವಿ….! ರಾತ್ರೋರಾತ್ರಿ ಪತ್ನಿಯನ್ನು ಮನೆಯಿಂದ ಹೊರಗಟ್ಟಿದ ಪಾಪಿ ಪತಿ

ಗಂಡ – ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಮಾತಿದೆ. ಆದರೆ ಮಧ್ಯ ಪ್ರದೇಶದಲ್ಲಿ ಗಂಡ – ಹೆಂಡತಿ ಜಗಳ ಪಕ್ಕದ ಮನೆಯ ಬಾಗಿಲು ಬಡಿಯುವಂತೆ ಮಾಡಿದೆ. ಮದ್ಯಪಾನ ಮಾಡಿದ್ದ ಪತಿ ರಾತ್ರೋರಾತ್ರಿ ಪತ್ನಿಯನ್ನು ಮನೆಯಿಂದ ಹೊರಗೆ ಅಟ್ಟಿದ್ದಾನೆ. ಇದಕ್ಕೆ ಕಾರಣ ಪಕ್ಕದ ಮನೆಯವಳ ಜೊತೆಯಿದ್ದ ಲವ್ವಿ-ಡವ್ವಿ..! ರಾತ್ರಿ ಕುಡಿದು ಬಂದ ಪತಿಯು ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಅಲ್ಲದೇ ತಾನು ನೆರೆಮನೆಯವಳ ಜೊತೆ ಇರೋದಾಗಿಯೂ ಹೇಳಿದ್ದಾನೆ. ಪತಿಯ ಮನೆಯಿಂದ ಹೊರಗಟ್ಟಲ್ಪಟ್ಟ ಬಳಿಕ ಸೀದಾ ಪೊಲೀಸ್​ ಠಾಣೆಗೆ ಬಂದ ಪತ್ನಿಯು ತನ್ನ ಪತಿ ಹಾಗೂ ನೆರೆ ಮನೆಯಾಕೆ ವಿರುದ್ಧ ದೂರು ದಾಖಲಿಸಿದ್ದಾಳೆ.

ಖಂಡ್ವಾ ಪೊಲೀಸ್​ ಠಾಣೆಯಲ್ಲಿ ಈ ಪ್ರಕರಣ ಸಂಬಂಧ ದೂರು ದಾಖಲಾಗಿದೆ. ದೂರಿನಲ್ಲಿ ರೂಪಾಲಿ ವರ್ಮಾ, ನನ್ನ ಪತಿ ಮನೀಷ್​ ವರ್ಮಾ ನೆರೆಮನೆಯಾಕೆ ಜೊತೆ ಸೇರಿ ನನಗೆ ಮಧ್ಯರಾತ್ರಿ 2 ಗಂಟೆಯವರೆಗೂ ಥಳಿಸಿದ್ದಾರೆ. ಅಲ್ಲದೇ ನನಗೆ ಕೊಲೆ ಬೆದರಿಕೆ ಕೂಡ ನೀಡಿದ್ದಾರೆ. ಹೀಗಾಗಿ ನಾನು ಮನೀಷ್ ವರ್ಮಾ ಹಾಗೂ ನೆರೆಮನೆಯಾಕೆ ಅಜ್ಜೂಬಾಯಿ ವಿರುದ್ಧ ದೂರು ದಾಖಲಿಸುತ್ತಿರೋದಾಗಿ ಬರೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ. ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್​ 294,323,506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ರೂಪಾಲಿ ಪತಿ ಮನೀಷ್​ ಮದ್ಯವ್ಯಸನಿಯಾಗಿದ್ದ. ಪತ್ನಿಯು ಅನಾರೋಗ್ಯದಿಂದ ಬಳಲುತ್ತಿದ್ದರೂ ಸಹ ಪತಿ ಮನೀಷ್​ ದಿನಕ್ಕೊಂದು ನೆಪವೊಡ್ಡಿ ಆಕೆಯ ಜೊತೆ ಜಗಳವಾಡುತ್ತಿದ್ದ. ಶನಿವಾರ ರಾತ್ರಿ ನೆರಮನೆಯಾಕೆ ಜೊತೆ ಸೇರಿ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಜೊತೆಯಲ್ಲಿ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ. ಇದೀಗ ಆರೋಪಿಗಳ ಬಂಧನವಾಗಿದ್ದು ವಿಚಾರಣೆ ಮುಂದುವರಿದಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...