alex Certify ಉಳಿತಾಯ ಮಾಡಿದ 40 ಲಕ್ಷ ರೂ. ಗಳನ್ನು ಬಡ ಮಕ್ಕಳಿಗೆ ನೀಡಿದ ಶಾಲಾ ಶಿಕ್ಷಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಳಿತಾಯ ಮಾಡಿದ 40 ಲಕ್ಷ ರೂ. ಗಳನ್ನು ಬಡ ಮಕ್ಕಳಿಗೆ ನೀಡಿದ ಶಾಲಾ ಶಿಕ್ಷಕ

ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ 39 ವರ್ಷಗಳು ಸರಕಾರಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಥಮಿಕ ಶಾಲೆ ಶಿಕ್ಷಕರೊಬ್ಬರು ತಮ್ಮ ಭವಿಷ್ಯ ನಿಧಿಯಲ್ಲಿ ಉಳಿಸಿದ್ದ 40 ಲಕ್ಷ ರೂ.ಗಳನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದಾನ ಮಾಡಿದ್ದಾರೆ.

ಖಾಂಡಿಯಾ ಎಂಬ ಪಟ್ಟಣದ ಶಾಲೆಯಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕ ವಿಜಯ್‌ ಕುಮಾರ್‌ ಛಾನ್ಸೊರಿಯಾ ಅವರೇ ಲಕ್ಷಗಟ್ಟಲೆ ದಾನ ಮಾಡಿದ ವಿಶಾಲ ಹೃದಯವಂತ. ಅವರಿಗೆ ಸಹಶಿಕ್ಷಕರು ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಂಡಿದ್ದಾಗ 40 ಲಕ್ಷ ರೂ. ನೆರವು ನೀಡುವ ಘೋಷಣೆ ಮಾಡಿದ್ದಾರೆ.

BIG NEWS: ಆಧುನಿಕ ಸೂಫಿ ಸಂತ ಇಬ್ರಾಹಿಂ ಸುತಾರ್ ವಿಧಿವಶ

ಭವಿಷ್ಯ ನಿಧಿಯನ್ನು ಮಕ್ಕಳಿಗೆ ನೀಡಲು ಪತ್ನಿ ಮತ್ತು ಮಕ್ಕಳು ಕೂಡ ಒಪ್ಪಿದ್ದಾರೆ. ಗ್ರಾಚ್ಯುಟಿ ಹಣವನ್ನು ಕೂಡ ಶಾಲೆಯ ಬಡ ಮಕ್ಕಳಿಗೆ ಕೊಡುತ್ತಿದ್ದೇನೆ. ಅವರು ಉನ್ನತ ವಿದ್ಯಾಭ್ಯಾಸ ಮಾಡಲು ಶುಲ್ಕವಾಗಿ ನನ್ನ ದಾನದ ಹಣವನ್ನು ಬಳಸಿಕೊಳ್ಳಬಹುದು. ಯಾರೂ ಕೂಡ ಜಗತ್ತಿನಲ್ಲಿ ಹಣ ಹಾಗೂ ಇತರ ಅಗತ್ಯಗಳಿಂದ ನರಳಬಾರದು. ನಮ್ಮ ಕೈಲಾದ ಸಹಾಯ ಅವರಿಗೆ ಸಿಗಬೇಕು ಎನ್ನುವುದು ನನ್ನ ಸಿದ್ಧಾಂತ ಎಂದು ವಿಜಯ್‌ ಅವರು ಬೀಳ್ಕೊಡುಗೆ ಭಾಷಣದಲ್ಲಿ ಹೇಳಿದ್ದಾರೆ.

ಆಟೋರಿಕ್ಷಾ ಓಡಿಸಿಕೊಂಡು, ಜತೆಗೆ ಹಾಲು ಮಾರಾಟ ಮಾಡುತ್ತಲೇ ವಿಜಯ್‌ ಅವರು ಶಿಕ್ಷಣ ಪೂರೈಸಿದ್ದರು. ಇಬ್ಬರು ಗಂಡುಮಕ್ಕಳು ಮತ್ತು ಒಬ್ಬ ಹೆಣ್ಣುಮಗಳನ್ನು ಹೊಂದಿರುವ ಶಿಕ್ಷಕ ವಿಜಯ್‌ ಅವರಿಗೆ ಸದ್ಯ ನೆಮ್ಮದಿಯ ಜೀವನಕ್ಕೆ ಅಗತ್ಯವಾದಷ್ಟು ದೇವರಿಂದ ಸಿಕ್ಕಿದೆ. ಮಕ್ಕಳು ಕೂಡ ಉತ್ತಮ ಕೆಲಸದಲ್ಲಿದ್ದು, ಕುಟುಂಬ ನಿರ್ವಹಣೆಯಲ್ಲಿ ನಿರತರಾಗಿದ್ದಾರೆ. ಮಗಳು ಮದುವೆಯಾಗಿ ಗಂಡನ ಮನೆಯಲ್ಲಿ ಆರಾಮಾಗಿದ್ದಾಳೆ. ಹಾಗಾಗಿ ಭವಿಷ್ಯ ನಿಧಿಯ ಅಗತ್ಯ ತಮಗೆ ಇಲ್ಲ ಎನ್ನುತ್ತಾರೆ ನಿವೃತ್ತ ಶಿಕ್ಷಕ. ಎಂಥ ದೊಡ್ಡ ಆಲೋಚನೆ ಅಲ್ಲವೇ?

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...