alex Certify ಸ್ನೇಹಿತನೊಂದಿಗೆ ಏಕಾಂತದಲ್ಲಿದ್ದ ಹುಡುಗಿಗೆ ಕಿರುಕುಳ, ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತನೊಂದಿಗೆ ಏಕಾಂತದಲ್ಲಿದ್ದ ಹುಡುಗಿಗೆ ಕಿರುಕುಳ, ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಹಲ್ಲೆ

ಗಯಾ: ಬಿಹಾರದಲ್ಲಿ ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಯುವಕರ ಗುಂಪೊಂದು ಏಕಾಂತದಲ್ಲಿದ್ದ ಹುಡುಗ-ಹುಡುಗಿಗೆ ಕಿರುಕುಳ ನೀಡಿದೆ. ಬಾಲಕಿಯನ್ನು ಬೆದರಿಸಿ ಎಳೆದಾಡಿ ಬಲವಂತವಾಗಿ ವಿಡಿಯೋ ಮಾಡಿಕೊಳ್ಳಲಾಗಿದೆ. ಸ್ನೇಹಿತನಿಂದ ದೂರವಾಗುವಂತೆ ಹಿಂಸೆ ನೀಡಲಾಗಿದೆ.

ಫೆಬ್ರವರಿ 20 ರಂದು ಶಾಲೆಯ ಸಮವಸ್ತ್ರ ಧರಿಸಿದ್ದ ಹುಡುಗಿ ಸ್ನೇಹಿತನೊಂದಿಗೆ ಏಕಾಂತ ಸ್ಥಳದಲ್ಲಿದ್ದಳು. ಇದನ್ನು ನೋಡಿದ ಯುವಕರ ಗುಂಪು ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಹಲ್ಲೆ ಮಾಡಿದ್ದಾರೆ. ಹುಡುಗಿ ಮುಖ ಮುಚ್ಚಿಕೊಳ್ಳಲು ಪ್ರಯತ್ನಿಸಿದರೂ ಅದಕ್ಕೆ ಅವಕಾಶ ನೀಡದೆ ಆಕೆ ಬಳಿ ಇದ್ದ ಸ್ಕಾರ್ಫ್ ಕಸಿದುಕೊಂಡು ಹೊಡೆಯಲು ಮುಂದಾಗಿದ್ದಾರೆ. ಆಕೆಯ ಜೊತೆಗಿದ್ದ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ.

ವಿಡಿಯೋದಲ್ಲಿ ಬಾಲಕಿ ಚಿತ್ರೀಕರಣ ಮಾಡಿಕೊಳ್ಳದಂತೆ ಅಂಗಲಾಚುತ್ತಿರುವ ದೃಶ್ಯ ಕಂಡುಬಂದಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡದಂತೆ ಮನವಿ ಮಾಡಿದ್ದಾಳೆ. ಹೀಗಿದ್ದರೂ ಕರುಣೆ ತೋರದೇ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಗಯಾ ಸಹಾಯಕ ಪೊಲೀಸ್ ಅಧೀಕ್ಷಕ ಆದಿತ್ಯ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು ಘಟನೆ ಬೆಳಕಿಗೆ ಬರುತ್ತಲೇ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...