alex Certify ಮಗು ಎಳೆದೊಯ್ಯಲು ಯತ್ನಿಸಿತ್ತಾ ಮಂಗ ? ವೈರಲ್‌ ಆಗಿರೋ ಹಳೆ ವಿಡಿಯೋದಲ್ಲಿದೆ ಒಂದು ಟ್ವಿಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗು ಎಳೆದೊಯ್ಯಲು ಯತ್ನಿಸಿತ್ತಾ ಮಂಗ ? ವೈರಲ್‌ ಆಗಿರೋ ಹಳೆ ವಿಡಿಯೋದಲ್ಲಿದೆ ಒಂದು ಟ್ವಿಸ್ಟ್

ಮಂಗವೊಂದು ಪುಟ್ಟ ಮಗುವನ್ನು ದರದರನೆ ಎಳೆದುಕೊಂಡು ಓಡಿಹೋಗಲು ಯತ್ನಿಸುತ್ತಿರುವ ಹಳೆಯ ವಿಡಿಯೋ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಗಲ್ಲಿಯೊಂದರಲ್ಲಿ ಸಣ್ಣ ಮಕ್ಕಳು ಕುಳಿತಿದ್ದು, ಅಲ್ಲಿಗೆ ಚಿಕ್ಕ ಮೋಟರ್​ ಸೈಕಲ್​ ಮೇಲೆ ಬರುವ ಕೋತಿ ಏಕಾಏಕಿ ಬೈಕನ್ನು ಬಿಟ್ಟು ಮಗುವನ್ನು ಎಳೆಯಲು ಆರಂಭಿಸುತ್ತದೆ. ಒಂದೆರೆಡು ಮೀಟರ್ ಗಳಷ್ಟು ದೂರ ಪುಟ್ಟ ಮಗುವನ್ನು ದರದರನೆ ಎಳೆದುಕೊಂಡುಹೋಗಿಬಿಡುತ್ತದೆ. ಆಗ ಅಲ್ಲೇ ಇದ್ದವರು ಕೋತಿಯನ್ನು ಬೆದರಿಸಿ ಮಗುವನ್ನು ರಮಿಸುವುದು ವಿಡಿಯೋದಲ್ಲಿ ಕಾಣಬಹುದು.

ಒಬ್ಬ ವ್ಯಕ್ತಿಯು ವಿಡಿಯೊ ರೆಕಾರ್ಡ್​ ಮಾಡುತ್ತಿದ್ದು, ಆತ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡುವುದು ಹಿಂದಿನಿಂದ ಕೇಳಿಸುತ್ತದೆ. ಒಂದು ಹಂತದಲ್ಲಿ ಕೋತಿಯು ಮಗುವಿನ ಮೇಲೆ ಹಿಡಿತ ಕಳೆದುಕೊಳ್ಳುತ್ತದೆ, ಆದರೆ ಅದು ಮತ್ತೆ ಹಿಂತಿರುಗಿ ಮಗುವನ್ನು ಎಳೆಯುತ್ತದೆ. ಆದರೆ ಬಹಳ ದೂರ ಎಳೆಯಲು ಸಾಧ್ಯವಾಗದ ಕಾರಣ ಅಪಾಯವಾಗಲಿಲ್ಲ.

ಈ ಘಟನೆಯಲ್ಲಿ ಕೋತಿಯನ್ನು ದೂಷಿಸಬೇಕು ಎಂದು ನೀವು ಭಾವಿಸಿದರೆ ತಪ್ಪಾಗುತ್ತದೆ. ಆ ವಿಡಿಯೋ ಸೂಕ್ಷ್ಮವಾಗಿ ಗಮನಿಸಿದರೆ, ಕೋತಿಯ ಕುತ್ತಿಗೆಗೆ ಹಗ್ಗವನ್ನು ಜೋಡಿಸಲಾಗಿದೆ. ಕೋತಿ ಅಂಬೆಗಾಲಿಡುವ ಮಗುವನ್ನು ಅಪಹರಿಸುತ್ತಿಲ್ಲ, ಹಗ್ಗದ ಇನ್ನೊಂದು ತುದಿಯಲ್ಲಿ ಎಳೆಯುತ್ತಿದ್ದ ಸಂದರ್ಭದಲ್ಲಿ ಅದು ಮಗುವನ್ನು ಹಿಡಿದುಕೊಂಡು ಎಳೆಯುವುದರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತದೆ. ಅದು ಮಗುವನ್ನು ಎಳೆದಂತೆ ಕಾಣಿಸುತ್ತದೆ.

— Figen (@TheFigen) July 25, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...