alex Certify ಹೀಗಿತ್ತು ಲಾಟರಿಯಲ್ಲಿ 10 ಕೋಟಿ ಗೆದ್ದವನ ಮೊದಲ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗಿತ್ತು ಲಾಟರಿಯಲ್ಲಿ 10 ಕೋಟಿ ಗೆದ್ದವನ ಮೊದಲ ಪ್ರತಿಕ್ರಿಯೆ

ಲಾಟರಿ ಡ್ರಾನಲ್ಲಿ ಗೆಲ್ಲುವುದು ಕೆಲವೊಮ್ಮೆ ಜೀವನವನ್ನೇ ಬದಲಿಸಿಬಿಡುವ ವಿಚಾರವಾಗಿಬಿಡುತ್ತದೆ. ಒಮ್ಮೆಲೇ ಕೋಟ್ಯಾಧೀಶರಾಗುವ ಸುದ್ದಿ ತಿಳಿದ ಕೂಡಲೇ ಅಂಥ ಮಂದಿಯ ಮೊಗದಲ್ಲಿ ಮೂಡುವ ಭಾವ ನೋಡುವುದೇ ಒಂದು ಮಜಾ.

ಇಂಥದ್ದೇ ಘಟನೆಯಲ್ಲಿ, ಟೆರ‍್ರಿ ಕೆನಡಿ ಹೆಸರಿನ ಈ ವ್ಯಕ್ತಿ ತನಗೆ ಲಾಟರಿಯಲ್ಲಿ ಒಂದು ದಶಲಕ್ಷ ಪೌಂಡ್ (10 ಕೋಟಿ ರೂ.ಗಳು) ಬಹುಮಾನವಾಗಿ ಸಿಕ್ಕಿದೆ ಎಂದು ಅರಿಯುತ್ತಲೇ ಏನಾಗುತ್ತಿದೆ ಎಂದು ಒಂದು ಕ್ಷಣ ನಂಬಲೇ ಆಗಲಿಲ್ಲ. ಆ ಸಂದರ್ಭದಲ್ಲಿ ಟೆರ‍್ರಿಯ ಮುಖಭಾವ ಹೇಗಿತ್ತು ಎಂದು ತೋರುವ ಫೋಟೋವೊಂದು ವೈರಲ್ ಆಗಿದೆ.

’ಇರುವುದು ಎರಡೇ ಲಿಂಗ’ ಎಂದು ಹೇಳಿದ ವಿದ್ಯಾರ್ಥಿ ವಿರುದ್ದ ಕ್ರಮ; ಶಾಲೆ ವಿರುದ್ದ ಕೋರ್ಟ್ ಮೆಟ್ಟಿಲೇರಿದ ಹುಡುಗ

ಲಾಟರಿಯಲ್ಲಿ ಗೆದ್ದ ವಿಷಯ ಅರಿತ ಟೆರ‍್ರಿಗೆ ಮೊದಲಿಗೆ ನಂಬಿಕೆಯೇ ಬರಲಿಲ್ಲ. ಲಾಟರಿ ನಡೆಸುವ ಮಂದಿಗೆ ಕರೆ ಮಾಡಿದ ಟೆರ‍್ರಿ ಖುದ್ದು ಈ ವಿಷಯವನ್ನು ಖಾತ್ರಿ ಪಡಿಸಿಕೊಂಡಿದ್ದಾರೆ. ಲಾಟರಿ ಗೆಲುವಿನ ಅಂಕಿಗಳು ಹಾಗೂ ತನ್ನ ಲಾಟರಿ ಟಿಕೇಟ್‌ನಲ್ಲಿದ್ದ ಅಂಕಿಗಳು ಹೋಲುವುದು ಹೀಗೆ ಖಾತ್ರಿಯಾದ ಕೂಡಲೇ ತನ್ನ ಆಸನದ ಮೇಲೆ ಹಾಗೇ ವಾಲಿದ ಟೆರ‍್ರಿ ಸಂತಸದ ನಗೆಯೊಂದನ್ನು ಹೊಮ್ಮಿಸಿ, ಸ್ನೇಹಿತರೊಂದಿಗೆ ಭಾರೀ ಸಂಭ್ರಮಾಚರಣೆಯಲ್ಲಿ ತೇಲಾಡಿದ್ದಾರೆ.

ವೃತ್ತಿಪರ ಫುಟ್ಬಾಲರ್‌ ಆದ ಟೆರ‍್ರಿ, 2011ರಲ್ಲಿ ಪದೇ ಪದೇ ಆಗುತ್ತಿದ್ದ ಗಾಯಗಳಿಂದಾಗಿ ಆಟಕ್ಕೆ ಗುಡ್‌ಬೈ ಹೇಳಿದ್ದರು. ಇದಾದ ಬಳಿಕ ಬೇರೆ ಕೆಲಸಗಳನ್ನು ಮಾಡಿಕೊಂಡು ಜೀವನ ಕಟ್ಟಿಕೊಳ್ಳಲು ನೋಡುತ್ತಿದ್ದರು ಟೆರ‍್ರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...