alex Certify ಖುಷಿ ಸುದ್ದಿ…..! 15,000 ರೂ.ನಿಂದ 21,000 ರೂ.ಗೆ ಹೆಚ್ಚಾಗಲಿದೆ ಮೂಲ ವೇತನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖುಷಿ ಸುದ್ದಿ…..! 15,000 ರೂ.ನಿಂದ 21,000 ರೂ.ಗೆ ಹೆಚ್ಚಾಗಲಿದೆ ಮೂಲ ವೇತನ

ಖಾಸಗಿ ಮತ್ತು ಸರ್ಕಾರಿ ವಲಯದ ಉದ್ಯೋಗಿಗಳಿಗೆ ಅಕ್ಟೋಬರ್ 1 ರಂದು ಖುಷಿ ಸುದ್ದಿ ಸಿಗುವ ಸಾಧ್ಯತೆಯಿದೆ. ಮಾಧ್ಯಮ ವರದಿಗಳ ಪ್ರಕಾರ, ಜುಲೈ 1 ರಿಂದ ಮೋದಿ ಸರ್ಕಾರ ಲೇಬರ್ ಕೋಡ್ ನಿಯಮಗಳನ್ನು ಜಾರಿಗೆ ತರಲು ಮುಂದಾಗಿತ್ತು ಆದರೆ ರಾಜ್ಯ ಸರ್ಕಾರಗಳು ಸಿದ್ಧವಿಲ್ಲದ ಕಾರಣ ಅದನ್ನು ಅಕ್ಟೋಬರ್ 1 ರವರೆಗೆ ಮುಂದೂಡಿದೆ. ಕಾರ್ಮಿಕ ಸಂಹಿತೆಯ ನಿಯಮಗಳನ್ನು ಅಕ್ಟೋಬರ್ 1 ರಿಂದ ಜಾರಿಗೊಳಿಸಿದರೆ, ನೌಕರರ ಮೂಲ ವೇತನ 15000 ರೂಪಾಯಿಯಿಂದ 21000 ರೂಪಾಯಿಗೆ ಹೆಚ್ಚಾಗಲಿದೆ.

ಹೊಸ ಕರಡು ನಿಯಮದ ಪ್ರಕಾರ, ಮೂಲ ವೇತನವು ಒಟ್ಟು ಸಂಬಳದ ಶೇಕಡಾ 50ರಷ್ಟು ಅಥವಾ ಹೆಚ್ಚಿರಬೇಕು. ಇದು ಹೆಚ್ಚಿನ ಉದ್ಯೋಗಿಗಳ ವೇತನವನ್ನು ಬದಲಾಯಿಸಲಿದೆ. ಮೂಲ ಸಂಬಳದ ಹೆಚ್ಚಳದೊಂದಿಗೆ, ಪಿಎಫ್ ಮತ್ತು ಗ್ರಾಚ್ಯುಟಿಗಾಗಿ ಕಡಿತಗೊಳಿಸುವ ಮೊತ್ತವು ಹೆಚ್ಚಾಗಲಿದೆ. ಮೂಲ ವೇತನ ಹೆಚ್ಚಾಗ್ತಿದ್ದರೂ ಕೈಗೆ ಬರುವ ಸಂಬಳ ಹೆಚ್ಚಾಗುವುದಿಲ್ಲ. ಪಿಎಫ್ ಮತ್ತು ಗ್ರಾಚ್ಯುಟಿಗೆ ಹೆಚ್ಚಿನ ಹಣ ಕಡಿತವಾಗಲಿದೆ.

ಗ್ರಾಚ್ಯುಟಿ ಮತ್ತು ಪಿಎಫ್‌ಗೆ ಹೆಚ್ಚಿನ ಹಣ ಕಡಿತಗೊಳ್ಳುವ ಜೊತೆಗೆ ನಿವೃತ್ತಿಯ ನಂತರ ಪಡೆಯುವ ಮೊತ್ತವು ಹೆಚ್ಚಾಗಲಿದೆ. ಪಿಎಫ್ ಮತ್ತು ಗ್ರಾಚ್ಯುಟಿ ಹೆಚ್ಚಳದೊಂದಿಗೆ, ಕಂಪನಿಗಳ ವೆಚ್ಚವೂ ಹೆಚ್ಚಾಗಲಿದೆ. ಕಂಪನಿಗಳ ಆಯವ್ಯಯದ ಮೇಲೂ ಇದು ಪರಿಣಾಮ ಬೀರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...