alex Certify ಬೈಕ್ ಡಿಕ್ಕಿ: ಕಾಂಗ್ರೆಸ್ ಶಾಸಕನ ತಾಯಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್ ಡಿಕ್ಕಿ: ಕಾಂಗ್ರೆಸ್ ಶಾಸಕನ ತಾಯಿ ಸಾವು

ಕಲಬುರಗಿ: ಬೈಕ್ ಡಿಕ್ಕಿಯಾಗಿ ಕಾಂಗ್ರೆಸ್ ವಿಧಾನ ಪರಿಷತ್ ಅರವಿಂದ ಕುಮಾರ್ ಅರಳಿ ಅವರ ತಾಯಿ ಮೃತಪಟ್ಟಿದ್ದಾರೆ.

ಕಲಬುರಗಿಯ ಸೇಡಂ ರಿಂಗ್ ರಸ್ತೆಯ ಟೊಯೋಟಾ ಶೋರೂಮ್ ಬಳಿ ಘಟನೆ ನಡೆದಿದೆ. ಅರವಿಂದ ಕುಮಾರ್ ಅವರ ತಾಯಿ ಸುಮಿತ್ರಾ(75) ಅವರು ಬೀದರ್ ನಿಂದ ಕಲಬುರಗಿಯಲ್ಲಿರುವ ಅಳಿಯನ ಮನೆಗೆ ಬಂದಿದ್ದಾರೆ.

ರಸ್ತೆ ದಾಟುವ ವೇಳೆ ಅಪರಿಚಿತ ಬೈಕ್ ಸವಾರ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಕುಸಿದು ಬಿದ್ದ ಸುಮಿತ್ರಾ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಭಾಗಿಯಾಗಿದ್ದ ಅರವಿಂದ ಕುಮಾರ್ ಅರಳಿ ವಿಷಯ ತಿಳಿದು ಕಲಬುರಗಿಗೆ ದೌಡಾಯಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...