alex Certify 2035 ರ ವೇಳೆಗೆ 100 % ವಿದ್ಯುದೀಕರಣಗೊಳ್ಳಲು ಮಿತ್ಸುಬಿಷಿ ಸಿದ್ಧತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2035 ರ ವೇಳೆಗೆ 100 % ವಿದ್ಯುದೀಕರಣಗೊಳ್ಳಲು ಮಿತ್ಸುಬಿಷಿ ಸಿದ್ಧತೆ

ಜಗತ್ತಿನಲ್ಲಿ ವಿದ್ಯುತ್‌ ಚಾಲಿತ ವಾಹನಗಳ (ಇವಿ) ಭರಾಟೆ ದಿನೇ ದಿನೇ ಜೋರಾಗುತ್ತಲೇ ಸಾಗಿರುವುದನ್ನು ಮನಗಂಡಿರುವ ಮಿತ್ಸುಬಿಷಿ ಮೋಟರ್ಸ್ ಕಾರ್ಪ್ 2035ರ ವೇಳೆಗೆ ತಾನು ಉತ್ಪಾದಿಸುವ ವಾಹನಗಳನ್ನು 100% ಹೈಬ್ರಿಡ್ ಆಗಿ ಪರಿವರ್ತಿಸಲು ಯೋಜನೆ ಹಾಕಿಕೊಂಡಿದೆ.

ಜಪಾನೀ ಆಟೋಮೊಬೈಲ್ ದಿಗ್ಗಜ ಮಿತ್ಸುಬಿಷಿ ಇದೇ ಸಂಬಂಧ ತನ್ನ ಪಾಲುದಾರರಾದ ಫ್ರೆಂಚ್‌ ಕಾರು ಉತ್ಪಾದಕರಾದ ರೆನೌ ಎಸ್‌ಎ ಹಾಗೂ ನಿಸಾನ್ ಮೋಟರ್‌ ಕೋಗಳೊಂದಿಗೆ ಹೊಸ ಒಡಂಬಡಿಕೆಗಳಿಗೆ ಸಹಿ ಮಾಡಿದೆ.

ಮುಂದಿನ ಐದು ವರ್ಷಗಳ ಅವಧಿಯಲ್ಲಿ ಈ ಸಂಬಂಧ ತನ್ನೆಲ್ಲಾ ಪ್ರಯತ್ನಗಳನ್ನು ಒರೆಗೆ ಹಚ್ಚಿ, ತಾನು ಉತ್ಪಾದಿಸುವ 50ರಷ್ಟು ಕಾರುಗಳನ್ನು 2030ರ ವೇಳೆಗೆ ವಿದ್ಯುದೀಕರಣಗೊಳಿಸುವುದಾಗಿ ಮಿತ್ಸುಬಿಷಿ ಈ ಹಿಂದೆ ತಿಳಿಸಿತ್ತು. ಇದೇ ವೇಳೆ ಯೂರೋಪ್‌ನಲ್ಲಿ ಇವಿಗಳನ್ನು ಪರಿಚಯಿಸಲು ಮಿತ್ಸುಬಿಷಿ ಸಿದ್ಧತೆ ನಡೆಸಿದ್ದು, ಈ ಸಂಬಂಧ ಶೀಘ್ರವೇ ಘೋಷಣೆಗಳನ್ನು ಮಾಡಲಿದೆ. ಈ ವಿಚಾರವಾಗಿ ಹೆಚ್ಚಿನ ಮಾಹಿತಿ ನೀಡಲು ಕಂಪನಿ ನಿರಾಕರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...