alex Certify BIG NEWS: ಸ್ವಾಗತ ಭಾಷಣದ ವೇಳೆ ಸಚಿವರ ಎಡವಟ್ಟು; ‘ಡಿಸಿಎಂ’ ಬದಲಿಗೆ ‘ಸಿಎಂ’ ಡಿ.ಕೆ.ಶಿವಕುಮಾರ್ ಎಂದ ಮಂಕಾಳ ವೈದ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸ್ವಾಗತ ಭಾಷಣದ ವೇಳೆ ಸಚಿವರ ಎಡವಟ್ಟು; ‘ಡಿಸಿಎಂ’ ಬದಲಿಗೆ ‘ಸಿಎಂ’ ಡಿ.ಕೆ.ಶಿವಕುಮಾರ್ ಎಂದ ಮಂಕಾಳ ವೈದ್ಯ

ಬೆಂಗಳೂರು: ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೀನುಗಾರಿಕಾ ಹಾಗೂ ಬಂದರು ಸಚಿವ ಮಂಕಾಳ ವೈದ್ಯ ಎಡವಟ್ಟು ಮಾಡಿಕೊಂಡಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಎಂದು ಸ್ವಾಗತಿಸಿದ ಘಟನೆ ನಡೆದಿದೆ.

ರಾಜ್ಯದಲ್ಲಿ ಅಧಿಕಾರ ಹಸ್ತಾಂತರ, ಸಿಎಂ ಕುರ್ಚಿಗಾಗಿ ಪೈಪೋಟಿ ವಿಚಾರವಾಗಿ ಭಾರಿ ಚರ್ಚೆ ನಡೆದಿರುವ ಸಂದರ್ಭದಲ್ಲೇ ಸಚಿವರು ಸ್ವಾಗತ ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿಯೇ ಡಿಸಿಎಂ ಅವರನ್ನು ಸಿಎಂ ಎಂದು ಸ್ವಾಗತಿಸಿದ್ದಾರೆ.

ವಿಧಾನಸೌಧದಲ್ಲಿ ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸ್ವಾಗತ ಭಾಷಣ ಮಾಡಿದ ಸಚಿವ ಮಂಕಾಳ ವೈದ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸ್ವಾಗತ ಎಂದು ಹೇಳುವ ಬದಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸ್ವಾಗತ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...