alex Certify ಪ್ರತಿ ದಿನ ಈ ಸಮಯದಲ್ಲಿ ಚಾಕೊಲೇಟ್ ತಿಂದ್ರೆ ಇಳಿಯಲಿದೆ ತೂಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ ದಿನ ಈ ಸಮಯದಲ್ಲಿ ಚಾಕೊಲೇಟ್ ತಿಂದ್ರೆ ಇಳಿಯಲಿದೆ ತೂಕ….!

ಚಾಕೊಲೇಟ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಚಾಕೊಲೇಟ್ ತಿನ್ನುತ್ತಾರೆ. ಚಾಕೊಲೇಟ್ ಪ್ರೇಮಿಗಳಿಗೆ ಹಾರ್ವರ್ಡ್ ಗೆಜೆಟ್‌ ವರದಿ ಖುಷಿ ನೀಡಿದೆ.

ನಿರ್ದಿಷ್ಟ ಸಮಯದಲ್ಲಿ ಚಾಕೊಲೇಟ್ ಸೇವನೆಯಿಂದ ತೂಕ ಇಳಿಸಬಹುದು ಎಂದು ಇದ್ರಲ್ಲಿ ಹೇಳಲಾಗಿದೆ. ವಿಶೇಷವಾಗಿ ಹಾಲಿನ ಚಾಕೊಲೇಟ್ ನಂಬರ್ ಒನ್ ಸ್ಥಾನದಲ್ಲಿದೆ.

ಬ್ರಿಗೇಮ್ ಮತ್ತು ಮಹಿಳಾ ಆಸ್ಪತ್ರೆಯ ಇಬ್ಬರು ಹಾರ್ವರ್ಡ್ ಮಾನ್ಯತೆ ಪಡೆದ ಪ್ರಾಧ್ಯಾಪಕರು ಈ ಅಧ್ಯಯನದ ವರದಿ ಬರೆದಿದ್ದಾರೆ, ಫ್ರಾಂಕ್ ಎ.ಜೆ.ಎ. ಶೀರ್ ಮತ್ತು ಮಾರ್ತಾ ಗ್ಯಾರಲೆಟ್ ಈ ಅಧ್ಯಯನ ನಡೆಸಿದ್ದಾರೆ. ಸ್ಪ್ಯಾನಿಷ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ನಡೆದ ಈ ಅಧ್ಯಯನದಲ್ಲಿ 19 ಮಹಿಳೆಯರು ಪಾಲ್ಗೊಂಡಿದ್ದರು. ಬೆಳಿಗ್ಗೆ ಹಾಸಿಗೆಯಿಂದ ಎದ್ದ ಒಂದು ಗಂಟೆ ನಂತ್ರ ಹಾಗೂ ರಾತ್ರಿ ಮಲಗಲು 1 ಗಂಟೆ ಮೊದಲು 100 ಗ್ರಾಂ ಹಾಲಿನ ಚಾಕೊಲೇಟ್ ನೀಡಲಾಗಿದೆ. ಚಾಕೊಲೇಟ್ ಸೇವನೆ ಮಾಡಿದವರು ಹಾಗೂ ಮಾಡದಿರುವವರನ್ನು ತುಲನೆ ಮಾಡಲಾಗಿದೆ.

ವಿಶೇಷವೆಂದ್ರೆ ಬೆಳಿಗ್ಗೆ ಅಥವಾ ರಾತ್ರಿ ಹಾಲಿನ ಚಾಕೊಲೇಟ್ ತಿಂದ ಕಾರಣ ಅವರ ತೂಕ ಹೆಚ್ಚಾಗಲಿಲ್ಲ. ಬೆಳಿಗ್ಗೆ ಅಥವಾ ರಾತ್ರಿ ಚಾಕೊಲೇಟ್ ತಿನ್ನುವುದು, ಹಸಿವು,ನಿದ್ರೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿತು. ಬೆಳಿಗ್ಗೆ ಹಾಲಿನ ಚಾಕೊಲೇಟ್ ಸೇವಿಸುವುದರಿಂದ ತೂಕ ಕಡಿಮೆಯಾಗುವ ಜೊತೆಗೆರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕಡಿಮೆಯಾಗಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ರಾತ್ರಿ ಚಾಕೊಲೇಟ್ ಸೇವನೆಯಿಂದ ಬೆಳಗಿನ ಚಯಾಪಚಯದಲ್ಲಿ ಬದಲಾವಣೆ ಕಂಡು ಬಂತು. ನಾವು ಸೇವಿಸುವ ಆಹಾರದ ಜೊತೆಗೆ ನಾವು ಯಾವಾಗ ಆಹಾರ ಸೇವನೆ ಮಾಡುತ್ತೇವೆ ಎಂಬುದು ತೂಕ ಏರಿಕೆ,ಇಳಿಕೆ ಮೇಲೆ ಪ್ರಭಾವ ಬೀರುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...