alex Certify ಪದವಿ ಪ್ರದಾನ ಸಮಾರಂಭದಲ್ಲೇ ಪ್ರೇಮ ನಿವೇದನೆ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದವಿ ಪ್ರದಾನ ಸಮಾರಂಭದಲ್ಲೇ ಪ್ರೇಮ ನಿವೇದನೆ: ವಿಡಿಯೋ ವೈರಲ್​

ಪ್ರೇಮ ನಿವೇದನೆ ಮಾಡಿಕೊಳ್ಳಲು ಒಬ್ಬೊಬ್ಬರು ಒಂದೊಂದು ವೇದಿಕೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಆದರೆ, ಇಲ್ಲೊಂದು ವಿಭಿನ್ನ ಘಟನೆಯಲ್ಲಿ ಪದವಿ ಪ್ರದಾನ ಸಮಾರಂಭದಲ್ಲಿ ಮಿಚಿಗನ್ ವಿದ್ಯಾರ್ಥಿಯೊಬ್ಬ ಕಾಲೇಜು ಪ್ರೇಮಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಇದರ ವಿಡಿಯೋ ವೈರಲ್​ ಆಗಿದೆ.

ಹೊಸದಾಗಿ ಪದವಿ ಪಡೆದ ವಿದ್ಯಾರ್ಥಿ ಡೇವಿಡ್ ಶೂಮೇಕರ್ ತನ್ನ ಗೆಳತಿಯನ್ನು ಪದವಿ ಪ್ರದಾನ ಸಮಾರಂಭದ ವೇದಿಕೆಯ ಮಧ್ಯಕ್ಕೆ ಕರೆತರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಡೇವಿಡ್ ಒಂದು ಮೊಣಕಾಲು ಊರಿದಾಗ ಯುವತಿ ರಿಯಾನ್ ಮೊದಲಿಗೆ ನಿಜವಾಗಿಯೂ ಗೊಂದಲಕ್ಕೊಳಗಾಗುತ್ತಾಳೆ. ನಂತರ ಸಂತೋಷದಿಂದ ಕಣ್ಣೀರು ಸುರಿಸುತ್ತಾಳೆ.

ಈ ಸಂದರ್ಭದಲ್ಲಿ ರಿಯಾನ್‌ಗೆ ಪ್ರಪೋಸ್ ಮಾಡುತ್ತಾನೆ. ಇದರಿಂದ ಖುಷಿಯಾದ ರಿಯಾನ್​ ಆತನಿಗೆ ಚುಂಬಿಸುತ್ತಾಳೆ. ಅಲ್ಲಿದ್ದವರು ಚಪ್ಪಾಳೆ ತಟ್ಟುತ್ತಾರೆ. ಈ ವಿಡಿಯೋಗೆ ಪರ- ವಿರೋಧ ನಿಲುವು ವ್ಯಕ್ತವಾಗಿದೆ. ಕೆಲವರು ಇದನ್ನು ಪ್ರೀ ಪ್ಲ್ಯಾನ್ಡ್​ ಎಂದೂ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...