alex Certify ‘ನನ್ನನ್ನು ಮದುವೆಯಾಗು’ ಎಂದು ನಡು ರಸ್ತೆಯಲ್ಲೇ ವರನ ಬೆನ್ನತ್ತಿದ ಹುಡುಗಿ…! ನಾಟಕೀಯ ದೃಶ್ಯದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನನ್ನನ್ನು ಮದುವೆಯಾಗು’ ಎಂದು ನಡು ರಸ್ತೆಯಲ್ಲೇ ವರನ ಬೆನ್ನತ್ತಿದ ಹುಡುಗಿ…! ನಾಟಕೀಯ ದೃಶ್ಯದ ವಿಡಿಯೋ ವೈರಲ್

ತನ್ನ ಪೋಷಕರೊಂದಿಗೆ ಮಾರುಕಟ್ಟೆಯಲ್ಲಿ ಹೋಗುತ್ತಿದ್ದ ಹುಡುಗಿಯೊಬ್ಬಳು ತನಗೆ ನಿಗದಿಯಾಗಿದ್ದ ವರನನ್ನು ಕಂಡ ವೇಳೆ ನನ್ನನ್ನು ಮದುವೆಯಾಗು ಎಂದು ಬೆನ್ನತ್ತಿರುವ ನಾಟಕೀಯ ಘಟನೆ ಬಿಹಾರದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ನವಾಡದ ಭಗತ್ ಸಿಂಗ್ ಚೌಕದಲ್ಲಿ ಈ ಹುಡುಗಿ ತನ್ನ ಪೋಷಕರೊಂದಿಗೆ ಹೋಗುತ್ತಿದ್ದ ವೇಳೆ ಈಕೆಗೆ ಮದುವೆ ನಿಶ್ಚಯವಾಗಿದ್ದ ವರ ಕಣ್ಣಿಗೆ ಬಿದ್ದಿದ್ದಾನೆ. ಕೂಡಲೇ ಆಕೆ ಅವನ ಬೆನ್ನತ್ತಿ ಮದುವೆ ಆಗುವಂತೆ ಪೀಡಿಸಿದ್ದು, ಒಂದು ಹಂತದಲ್ಲಿ ಕೈ ಹಿಡಿದು ಎಳೆದಿದ್ದಾಳೆ. ಹುಡುಗ ಓಡಿ ಹೋಗಲು ಯತ್ನಿಸಿದರೂ ಆಕೆ ಬಿಟ್ಟಿಲ್ಲ.

ಇವರ ಮದುವೆ ಮೊದಲೇ ನಿಶ್ಚಯವಾಗಿದ್ದು, ಆದರೆ ವರ ಕುಂಟು ನೆಪಗಳನ್ನು ಹೇಳಿಕೊಂಡು ಮದುವೆಯನ್ನು ಮುಂದೂಡುತ್ತಲೇ ಇದ್ದ ಎನ್ನಲಾಗಿದೆ. ಹೀಗಾಗಿ ಹುಡುಗಿ ಮದುವೆಯಾಗುವಂತೆ ಬೆನ್ನು ಬಿದ್ದಿದ್ದು, ಆಕೆ ಪೋಷಕರೂ ಇದಕ್ಕೆ ಸಾಥ್ ನೀಡಿದ್ದಾರೆ. ಜನನಿಬಿಡ ಮಾರುಕಟ್ಟೆಯಲ್ಲಿ ನಡೆದ ಈ ಘಟನೆಯಿಂದ ಸಾರ್ವಜನಿಕರು ಶಾಕ್ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...