alex Certify ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼಮೆಂತೆʼ ಕಷಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼಮೆಂತೆʼ ಕಷಾಯ

 

ಬೆಳಿಗ್ಗೆ ಎಂದಾಕ್ಷಣ ಟೀ, ಕಾಫಿ ಕುಡಿಯುವ ಅಭ್ಯಾಸ ಕೆಲವರಿಗಿರುತ್ತದೆ. ಅಂತಹವರು ಒಮ್ಮೆ ಈ ಮೆಂತೆ ಕಷಾಯ ಮಾಡಿಕೊಂಡು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಂತೆಪುಡಿ ಮಾಡಿಟ್ಟುಕೊಂಡರೆ ಕೆಲಸ ಸಲೀಸು.

ಬೇಕಾಗುವ ಸಾಮಾಗ್ರಿಗಳು: ¼ ಟೀ ಸ್ಪೂನ್ ಮೆಂತೆಕಾಳು ಪುಡಿ, ಸಣ್ಣ ತುಂಡು ಬೆಲ್ಲ, ನೀರು-1/2 ಕಪ್, ಹಾಲು ½ ಕಪ್.

ಮಾಡುವ ವಿಧಾನ: 1 ಕಪ್ ಮೆಂತೆಕಾಳನ್ನು ಚೆನ್ನಾಗಿ ಹುರಿದುಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಹಾಕಿ ನಯವಾಗಿ ಪುಡಿಮಾಡಿಕೊಳ್ಳಿ.

ನಂತರ ಪಾತ್ರೆಯಲ್ಲಿ ನೀರು ಹಾಕಿ ಅದು ಕುದಿ ಬರುತ್ತಿದ್ದಂತೆ ಬೆಲ್ಲದ ತುಂಡು ಹಾಕಿ ನಂತರ ಮೆಂತೆಕಾಳಿನ ಪುಡಿ ¼ ಟೀ ಚಮಚ ಹಾಕಿ ಚೆನ್ನಾಗಿ ಕುದಿಸಿ. ನಂತರ ಗ್ಯಾಸ್ ಆಫ್ ಮಾಡಿ. ಕಾಯಿಸಿದ ಹಾಲಿಗೆ ಕುದಿಸಿಕೊಂಡ ಮೆಂತೆದ ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಆಮೇಲೆ ಕುಡಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...