alex Certify ಮಾಜಿ ಗರ್ಲ್ ಫ್ರೆಂಡ್ ಮದುವೆಯಲ್ಲಿ ಪಾಲ್ಗೊಂಡ ಪುರುಷರ ಅನುಭವ ಹೇಗಿರುತ್ತೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಗರ್ಲ್ ಫ್ರೆಂಡ್ ಮದುವೆಯಲ್ಲಿ ಪಾಲ್ಗೊಂಡ ಪುರುಷರ ಅನುಭವ ಹೇಗಿರುತ್ತೆ ಗೊತ್ತಾ…?

ಮದುವೆ ಸಮಾರಂಭದಲ್ಲಿ ಹಾಜರಾಗಿ ಖುಷಿ, ಸಡಗರ, ಸಂಭ್ರಮದಲ್ಲಿ ಮಿಂದೇಳುವುದು ಸಾಮಾನ್ಯ ಸಂಗತಿ. ಆದರೆ ನೀವು ನಿಮ್ಮ ಮಾಜಿ ಗರ್ಲ್ ಫ್ರೆಂಡ್ ಮದುವೆಗೆ ಹಾಜರಾಗಿದ್ದರೆ ಅಷ್ಟೇ ಸಂಭ್ರಮ, ಖುಷಿಯಾಗುತ್ತದೆಯೇ?

ಇದೀಗ ಇಂತದ್ದೊಂದು ವಿಚಾರ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ತಮ್ಮ ಎಕ್ಸ್ ಗರ್ಲ್ ಫ್ರೆಂಡ್ ಮದುವೆಯಲ್ಲಿ ಭಾಗವಹಿಸಿದವರು ತಮ್ಮ ಅನುಭವ ಹಂಚಿಕೊಂಡು, ಅದೊಂದು ಯೋಗ್ಯವಲ್ಲದ ಮೂವ್‌ಮೆಂಟ್ ಎಂದು ಹೇಳಿಕೊಂಡಿದ್ದಾರೆ.

ವೋಲ್ವೊ XC40 ರೀಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ ಹೊಸಕೋಟೆಯಲ್ಲಿ ಜೋಡಣೆ

ರೆಡ್ಡಿಟ್ ಬಳಕೆದಾರರೊಬ್ಬರು ತಮ್ಮ ಮಾಜಿ ಗೆಳತಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಮತ್ತು ತಮ್ಮನ್ನು ಆಹ್ವಾನಿಸಲಾಗಿದೆ. ಆದರೆ, ಹಾಜರಾಗಬೇಕೆ ಅಥವಾ ಬೇಡವೇ ಎಂದು ಗೊಂದಲದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಪ್ರತಿಕ್ರಿಯೆ ಅಪ್‌ಲೋಡ್ ಮಾಡಿದ ನಂತರ, ಪೋಸ್ಟ್ ಅತ್ಯಂತ ಚಿತ್ರ ವಿಚಿತ್ರ ಅಭಿಪ್ರಾಯದೊಂದಿಗೆ ವೈರಲ್ ಆಯಿತು.

ಆತನು ಸುಂದರವಾದ ಮದುವೆಯ ಊಟ ಆಸ್ವಾದಿಸಬೇಕೆಂದು ಕೆಲವರು ಭಾವಿಸಿದರೆ, ಇನ್ನು ಕೆಲವರು ಅದನ್ನು ಸರಿಯಲ್ಲ ಎಂದು ಆಕ್ಷೇಪಿಸಿದರು.

ನಾನು ನನ್ನ ಮಾಜಿ ಜೊತೆ ಇಡೀ ವರ್ಷ ಮಾತನಾಡಿರಲಿಲ್ಲ. ಒಂದು ದಿನ ಅವಳು ಕರೆ ಮಾಡಿ ತನ್ನ ಮದುವೆಗೆ ನನ್ನನ್ನು ಆಹ್ವಾನಿಸಿದಳು. ನಾನು ಹೋಗಲಿಲ್ಲ. ಮರುದಿನ ಬೆಳಿಗ್ಗೆ ಎಂಬಿಎಗೆ ಪ್ರವೇಶ ಪರೀಕ್ಷೆ ಇತ್ತು. ರಾತ್ರಿಯಿಡೀ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಮರುದಿನ ಬೆಳಿಗ್ಗೆ ನಾನು ಮುಗಿದ ಅಧ್ಯಾಯ ಎಂದು ಮನವರಿಕೆ ಮಾಡಿ ಪರೀಕ್ಷೆ ಎದುರಿಸಿದೆ. ಚೆನ್ನಾಗಿಯೇ ಬರೆದೆ ಎಂದು ಒಬ್ಬರು ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...