alex Certify ವೋಲ್ವೊ XC40 ರೀಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ ಹೊಸಕೋಟೆಯಲ್ಲಿ ಜೋಡಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೋಲ್ವೊ XC40 ರೀಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ ಹೊಸಕೋಟೆಯಲ್ಲಿ ಜೋಡಣೆ

ಬೆಂಗಳೂರು: ಪೂರ್ಣ ಪ್ರಮಾಣದ ಎಲೆಕ್ಟ್ರಿಕ್‌ ಕಾಂಪ್ಯಾಕ್ಟ್‌ ಎಸ್‌ಯುವಿ XC40 ಅನ್ನು ಬೆಂಗಳೂರು ಸಮೀಪದ ಹೊಸಕೋಟೆಯ ಉತ್ಪಾದನಾ ಘಟಕದಲ್ಲಿ ಜೋಡಿಸುವುದಾಗಿ ಸ್ವೀಡಿಷ್‌ ಕಾರು ತಯಾರಕ ಕಂಪನಿ ವೋಲ್ವೋ ಕಾರ್‌ ಘೋಷಿಸಿದೆ.

ಎಲೆಕ್ಟ್ರಿಕ್ ಕಾಂಪ್ಯಾಕ್ಟ್ SUV XC40 ರೀಚಾರ್ಜ್ ಮುಂದಿನ ತಿಂಗಳು ದೇಶದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ವೋಲ್ವೋ ಕಾರ್ ಇಂಡಿಯಾ 2017 ರಲ್ಲಿ ಸ್ಥಳೀಯ ಜೋಡಣಾ ಘಟಕವನ್ನು ಪ್ರಾರಂಭಿಸಿತು. ಬಿಡಿಭಾಗಗಳನ್ನು ತರಿಸಿಕೊಂಡು ಸ್ಥಳೀಯವಾಗಿ ಜೋಡಿಸಿ ಮಾರಾಟ ಮಾಡುವುದರ ಕಡೆಗೆ ಗಮನ ಹರಿಸುತ್ತಿರುವುದಾಗಿ ಕಂಪನಿ ಸ್ಪಷ್ಟಪಡಿಸಿದೆ.

ಪ್ರಸ್ತುತ, SUV XC90, ಮಧ್ಯಮ ಗಾತ್ರದ SUV XC60, ಕಾಂಪ್ಯಾಕ್ಟ್ ಐಷಾರಾಮಿ SUV XC40 ಮತ್ತು ಐಷಾರಾಮಿ ಸೆಡಾನ್ S90 ಅನ್ನು ಬೆಂಗಳೂರಿನ ಘಟಕದಲ್ಲಿ ಸ್ಥಳೀಯವಾಗಿ ಜೋಡಿಸಲಾಗುತ್ತಿದೆ. XC40 ರೀಚಾರ್ಜ್ ಎಲೆಕ್ಟ್ರಿಕ್, ಒಂದೇ ಚಾರ್ಜ್‌ನಲ್ಲಿ 418 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಇದು ಭಾರತಕ್ಕೆ ಹೊಸದು ಎಂದು ಕಂಪನಿ ಹೇಳಿದೆ.

ವೋಲ್ವೋ ಕಾರ್ ಇಂಡಿಯಾ ಕಳೆದ ವರ್ಷ XC60, S90, ಮತ್ತು XC90 (ಪೆಟ್ರೋಲ್) ಮಾದರಿಗಳನ್ನು ಪರಿವರ್ತನೆಯ ಭಾಗವಾಗಿ 48V ಮೈಲ್ಡ್‌- ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಪೆಟ್ರೋಲ್ ಪೋರ್ಟ್‌ಫೋಲಿಯೊಗೆ ಪರಿಚಯಿಸಿತು. ಅದೇ ರೀತಿ, ಎಲ್ಲ ಡೀಸೆಲ್ ಮಾದರಿಗಳನ್ನು ಹಂತಹಂತವಾಗಿ ತೆಗೆದುಹಾಕಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...