alex Certify ದಿವಂಗತ ನಟಿ ಶ್ರೀದೇವಿಗೆ ಸಹೋದರಿಯಿದ್ದಾರೆಂಬುದು ನಿಮಗೆ ಗೊತ್ತೇ ? ಅನ್ಯೋನ್ಯವಾಗಿದ್ದ ಇಬ್ಬರ ನಡುವೆ ವೈಮನಸ್ಯ ಮೂಡಲು ಕಾರಣವಾಗಿತ್ತು ಆ ಘಟನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿವಂಗತ ನಟಿ ಶ್ರೀದೇವಿಗೆ ಸಹೋದರಿಯಿದ್ದಾರೆಂಬುದು ನಿಮಗೆ ಗೊತ್ತೇ ? ಅನ್ಯೋನ್ಯವಾಗಿದ್ದ ಇಬ್ಬರ ನಡುವೆ ವೈಮನಸ್ಯ ಮೂಡಲು ಕಾರಣವಾಗಿತ್ತು ಆ ಘಟನೆ…!

శ్రీదేవి చెల్లి శ్రీలతను లాగి పెట్టి కొట్టిందెవరు .. | unknown facts about  sridevi sister srilatha, sridevi sister, srilatha, srilatha and sridevi,  maheshwari, movie shooting, tollywood movie, unknown facts ...ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾದ ಶ್ರೀದೇವಿ 2018ರಲ್ಲಿ ನಿಧನರಾದ್ರು. ಆದರೆ, ಅವರು ತಮ್ಮ ಚಲನಚಿತ್ರಗಳ ಮೂಲಕ ಪ್ರಪಂಚದಾದ್ಯಂತದ ಲಕ್ಷಾಂತರ ಜನರ ಹೃದಯದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಹೇಮಾಮಾಲಿನಿ ಮತ್ತು ರೇಖಾ ಅವರಂತಹ ನಟಿಯರೇ ಬಾಲಿವುಡ್ ನಿರ್ದೇಶಕರ ಮೊದಲ ಆಯ್ಕೆಯಾಗಿದ್ದ ಸಮಯದಲ್ಲಿ ಶ್ರೀದೇವಿ 80ರ ದಶಕದಲ್ಲಿ ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ರು.

ವೃತ್ತಿಜೀವನದ ಅವಧಿಯಲ್ಲಿ, ಶ್ರೀದೇವಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರೀದೇವಿಯವರ ವೃತ್ತಿ ಜೀವನದ ಬಗ್ಗೆ ನಿಮಗೆ ಅನೇಕ ವಿಷಯಗಳು ತಿಳಿದಿರಬಹುದು. ಆದರೆ, ಅವರ ಸಹೋದರಿ ಶ್ರೀಲತಾ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಶ್ರೀದೇವಿ ಮತ್ತು ಶ್ರೀಲತಾ ಬಹಳ ಬಲವಾದ ಬಾಂಧವ್ಯವನ್ನು ಹಂಚಿಕೊಂಡಿದ್ದವರು. ಇಬ್ಬರು ಸಹೋದರಿಯರ ನಡುವೆ ಸಾಕಷ್ಟು ಪ್ರೀತಿ ಇತ್ತು. ಆದರೆ, ನಂತರ ಇವರಿಬ್ಬರ ನಡುವೆ ಅದೇನಾಯ್ತೋ ಏನೋ ಸಂಬಂಧ ಕಡಿತಗೊಂಡಿತು.

ಶ್ರೀದೇವಿ ಚಿತ್ರರಂಗದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದಾಗ, ಶ್ರೀಲತಾ ಅವರ ಜೊತೆಯಲ್ಲಿ ಸಿನಿಮಾ ಸೆಟ್‌ಗಳಿಗೆ ಹೋಗುತ್ತಿದ್ದರು. 1972ರಿಂದ 1993ರವರೆಗೆ ಶ್ರೀಲತಾ ಅವರು ಶ್ರೀದೇವಿಯ ಪ್ರತಿಯೊಂದು ಚಿತ್ರದ ಸೆಟ್‌ಗಳಿಗೂ ಭೇಟಿ ನೀಡುತ್ತಿದ್ದರು. ಶ್ರೀಲತಾ ಕೂಡ ಶ್ರೀದೇವಿಯಂತೆ ನಟಿಯಾಗಬೇಕೆಂದು ಬಯಸಿದ್ದರು. ಆದರೆ, ಅವರಿಗೆ ಅಂಥಾ ಯಶಸ್ಸು ಸಿಗಲಿಲ್ಲ. ಹೀಗಾಗಿ ನಂತರ ಅವರು ಶ್ರೀದೇವಿಯ ಮ್ಯಾನೇಜರ್ ಆದರು.

ಬಹಳ ಅನ್ಯೋನ್ಯವಾಗಿದ್ದ ಈ ಸಹೋದರಿಯರಲ್ಲಿ ಭಿನ್ನಾಭಿಪ್ರಾಯ ಮೂಡಿ ಸಂಬಂಧ ಕಹಿಯಾಯ್ತು. ಅವರ ತಾಯಿಯ ಮರಣದ ನಂತರ ಇಬ್ಬರು ಸಹೋದರಿಯರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಲು ಶುರುವಾಯ್ತು ಎನ್ನಲಾಗಿದೆ. ಶ್ರೀದೇವಿಯ ತಾಯಿ ಒಮ್ಮೆ ಆಪರೇಷನ್‌ಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆಪರೇಷನ್ ನಲ್ಲಿ ಏನೋ ಎಡವಟ್ಟಾಗಿ ಅವರ ತಾಯಿ ಸ್ಮರಣೆಯನ್ನು ಕಳೆದುಕೊಂಡರು. 1996ರಲ್ಲಿ ಅವರ ತಾಯಿ ನಿಧನರಾದ್ರು. ಹೀಗಾಗಿ ಆಸ್ಪತ್ರೆಯ ವಿರುದ್ಧ ಶ್ರೀದೇವಿ ಕೇಸ್ ದಾಖಲಿಸಿದ್ರು.

ಶ್ರೀದೇವಿ ಆಸ್ಪತ್ರೆ ವಿರುದ್ಧದ ಪ್ರಕರಣದಲ್ಲಿ ಗೆದ್ದು ಸುಮಾರು 7.2 ಕೋಟಿ ರೂ. ಪರಿಹಾರದ ಮೊತ್ತವನ್ನು ಪಡೆದ್ರು. ಇಷ್ಟೂ ಮೊತ್ತವನ್ನು ಶ್ರೀದೇವಿ ತನ್ನ ಬಳಿಯೇ ಇಟ್ಟುಕೊಂಡಿದ್ದರು. ಇದು ಇಬ್ಬರು ಸಹೋದರಿಯರ ನಡುವಿನ ಸಂಬಂಧದಲ್ಲಿ ಕಹಿಯಾಗಲು ಕಾರಣವಾಯಿತು ಎಂದು ಹೇಳಲಾಗುತ್ತದೆ. ನಂತರ ಶ್ರೀಲತಾ ಅವರು ತಮ್ಮ ಪಾಲಿನ ಹಣವನ್ನು ಪಡೆಯಲು ಶ್ರೀದೇವಿ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ರು. ತಾಯಿಯ ಮಾನಸಿಕ ಸ್ಥಿತಿ ಚೆನ್ನಾಗಿರಲಿಲ್ಲ. ಅವರು ತಮ್ಮ ಎಲ್ಲಾ ಆಸ್ತಿಯನ್ನು ಶ್ರೀದೇವಿಗೆ ವರ್ಗಾಯಿಸಿದ್ದಾರೆ ಎಂದು ಹೇಳಿದ್ರು.

ಪ್ರಕರಣದಲ್ಲಿ ಶ್ರೀಲತಾ ಗೆದ್ದು ತನ್ನ ಪಾಲಿನ 2 ಕೋಟಿ ರೂ. ಪಡೆದುಕೊಂಡ್ರು. ಶ್ರೀದೇವಿ ಪತಿ ಬೋನಿ ಕಪೂರ್ ಸಹ ಇಬ್ಬರು ಸಹೋದರಿಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು ಎಂದು ಹೇಳಲಾಗುತ್ತದೆ. ಆದರೆ, ಶ್ರೀದೇವಿಯ ಸಾವಿನ ನಂತರ ಶ್ರೀಲತಾ ಚೆನ್ನೈನಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲೂ ಕಾಣಿಸಿಕೊಂಡಿರಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...