alex Certify ಆಸ್ಟ್ರೇಲಿಯಾದ ಅತಿ ಶ್ರೀಮಂತರ ಪಟ್ಟಿಯಲ್ಲಿದ್ದಾರೆ ಈ ʼಭಾರತೀಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಟ್ರೇಲಿಯಾದ ಅತಿ ಶ್ರೀಮಂತರ ಪಟ್ಟಿಯಲ್ಲಿದ್ದಾರೆ ಈ ʼಭಾರತೀಯʼ

ಭಾರತದಲ್ಲಿ ಅಂತಾರಾಷ್ಟ್ರೀಯ ಉದ್ಯಮ ನಡೆಸುವ ಅನೇಕ ಕೋಟ್ಯಾಧಿಪತಿಗಳು ಇದ್ದಾರೆ. ಅನೇಕರು ಸಾಗರೋತ್ತರದಲ್ಲಿಯೂ ತಮ್ಮ ಉದ್ಯಮವನ್ನು ಯಶಸ್ವಿಯಾಗಿ ನಡೆಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ಉದ್ಯಮಿಗಳಲ್ಲಿ ವಿವೇಕ್​ ಚಂದ್​ ಸೆಹಗಲ್​ ಕೂಡ ಒಬ್ಬರು.

ಸೆಹಗಲ್​ ಆಸ್ಟ್ರೇಲಿಯಾದಲ್ಲಿ ವಾಸಿಸುವ ಅತ್ಯಂತ ಶ್ರೀಮಂತ ಭಾರತೀಯ ಎನಿಸಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ಎರಡೂ ಕಡೆಗಳಲ್ಲಿ ಸೆಹಗಲ್​ ಸ್ವಂತ ಉದ್ಯಮ ಹೊಂದಿದ್ದಾರೆ. ಸೆಹಗಲ್​ 105. 5 ಶತಕೋಟಿ ಅಮೆರಿಕನ್​ ಡಾಲರ್​ಗಿಂತಲೂ ಅಧಿಕ ಆದಾಯ ಹೊಂದಿದ್ದಾರೆ. ಭಾರತದ ರೂಪಾಯಿ ಮೌಲ್ಯದ ಪ್ರಕಾರ ಸೆಹಗಲ್​ ಆಸ್ತಿ ಸರಿಸುಮಾರು 87,404 ಕೋಟಿ ರೂಪಾಯಿ ಅಗಿದೆ.

ಸೆಹಗಲ್ ಕಂಪನಿಯ ಹೆಸರು ಮದರ್​ಸನ್​ ಎಂದಾಗಿದೆ. ವಿವೇಕ್​ ಸೆಹಗಲ್​ ತಮ್ಮ ತಾಯಿ ದಿವಂಗತ ಸ್ವರಣ್​ ಲತಾ ಸೆಹಗಲ್​ರೊಂದಿಗೆ ಈ ಕಂಪನಿ ಕಟ್ಟಿದ್ದರು ಎನ್ನಲಾಗಿದೆ. ಬೆಳ್ಳಿ ವ್ಯಾಪಾರದಿಂದ ಆರಂಭಗೊಂಡ ಈ ಉದ್ಯಮವು ಇಂದು ದೊಡ್ಡ ಕಂಪನಿಯಾಗಿ ಬೆಳೆದಿದೆ ಹಾಗೂ ಆಟೋ ಉದ್ಯಮದಲ್ಲಿಯೂ ಸಿಂಹಪಾಲನ್ನು ಪಡೆದುಕೊಂಡಿದೆ.

ಸೆಹಗಲ್​ ತಾತ ಕೂಡ ಯಶಸ್ವಿ ಆಭರಣ ವ್ಯಾಪಾರಿಯಾಗಿದ್ದರು. ಕೇವಲ 18 ವರ್ಷ ಪ್ರಾಯದಲ್ಲಿ ಸೆಹಗಲ್​ ಒಂದು ಕೆಜಿ ಬೆಳ್ಳಿಯನ್ನು ಒಂದು ರೂಪಾಯಿಗೆ ಮಾರಾಟ ಮಾಡುವ ಮೂಲಕ ಬೆಳ್ಳಿ ವ್ಯಾಪಾರ ಆರಂಭಿಸಿದರು. 1970ರ ದಶಕದ ಆರಂಭದಲ್ಲಿ ತಿಂಗಳಿಗೆ 2500 ರೂಪಾಯಿ ಗಳಿಸುತ್ತಿದ್ದರು. ಬೆಳ್ಳಿ ವ್ಯಾಪಾರ ಹಾಗೂ ಹೂಡಿಕೆ ಉದ್ಯಮದಲ್ಲಿ ಯಶಸ್ಸು ಕಾಣುವ ಮೂಲಕ ಸೆಹಗಲ್​ ಯಶಸ್ವಿ ಉದ್ಯಮಿ ಎನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...