alex Certify ಕೆರೆಗಳ ಪುನರುಜ್ಜೀವನಕ್ಕಾಗಿ ಕೆಲಸ ತೊರೆದ ಇಂಜಿನಿಯರ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆರೆಗಳ ಪುನರುಜ್ಜೀವನಕ್ಕಾಗಿ ಕೆಲಸ ತೊರೆದ ಇಂಜಿನಿಯರ್​…!

ಪರಿಸರ ಉಳಿಸಲು ಭಾರತದಲ್ಲಿ ಸಾವಿರಾರು, ಲಕ್ಷಾಂತರ ಸಂಖ್ಯೆಯಲ್ಲಿ ಜನ ಸಿಗುತ್ತಾರೆ. ಅವರಲ್ಲೊಬ್ಬ ವಿಶೇಷ ವ್ಯಕ್ತಿಯನ್ನು ಇಲ್ಲಿ ಪರಿಚಯಿಸಿಕೊಡಲಾಗುತ್ತಿದೆ. ಗ್ರೇಟರ್​ ನೋಯ್ಡಾದ 29 ವರ್ಷದ ಇಂಜಿನಿಯರ್​ ರಾಮ್​ವೀರ್​ ತನ್ವಾರ್​ ಕೆರೆ ಸಂರಕ್ಷಣೆಗಾಗಿ ವಿಶೇಷ ಜವಾಬ್ದಾರಿಯನ್ನು ಸ್ವತಃ ತೆಗೆದುಕೊಂಡಿದ್ದಾರೆ. ದಾದಾ -ದಬ್ರಾ ಗ್ರಾಮದ ನಿವಾಸಿ ರಾಮ್​ವೀರ್​ ಮೆಕ್ಯಾನಿಕಲ್​ ಎಂಜಿನಿಯರಿಂಗ್​ನಲ್ಲಿ ಪದವಿ ಪಡೆದಿದ್ದಾರೆ ಮತ್ತು ಬಹುರಾಷ್ಟ್ರೀಯ ಕಂಪನಿಯಲ್ಲಿ ಉತ್ತಮ ಸಂಬಳದ ಉದ್ಯೋಗ ಹೊಂದಿದ್ದರು.

ಆದರೆ ಉತ್ತಮ ಸಂಬಳದ ಉದ್ಯೋಗದ ಸವಲತ್ತುಗಳು ಆ ಯುವಕನಿಗೆ ಆಸಕ್ತಿ ತರಲಿಲ್ಲ. ಜಗತ್ತಿಗೆ ತನ್ನಿಂದೇನಾದರೂ ಸಮಾಜಕ್ಕೆ ಕೊಡುಗೆ ಸಿಗಬೇಕೆಂದು ಆತ ಕೆಲಸ ಬಿಟ್ಟು ಕೆರೆಗಳನ್ನು ಸಂರಕ್ಷಿಸಲು ಆರಂಭಿಸಿದ್ದಾರೆ. ಇಲ್ಲಿಯವರೆಗೆ ರಣವೀರ್​ ಅನೇಕ ರಾಜ್ಯಗಳಲ್ಲಿ ಸುಮಾರು 40 ಕೆರೆಗಳನ್ನು ಪುನರುಜ್ಜೀವನಗೊಳಿಸಿದ್ದಾರೆ.

ತಾಜ್​ ಮಹಲ್​ ಮತ್ತು ಕೆಂಪು ಕೋಟೆ ನಮ್ಮ ಪೂರ್ವಜರು ನಮಗೆ ಬಿಟ್ಟುಹೋದ ಸ್ಮಾರಕಗಳಂತೆ, ಕೊಳಗಳು ಮತ್ತು ಕೆರೆಗಳು ಸಹ ಹಿರಿಯರ ಬಳುವಳಿಗಳು. ಆದರೆ, ನಮ್ಮ ನಡುವಿನ ಕೆರೆಗಳು ಒಣಗುತ್ತಿವೆ. ನಮ್ಮ ಮುಂದಿನ ಪೀಳಿಗೆಗೆ ನಾವು ಬತ್ತಿದ ಹೊಂಡಗಳನ್ನು ಬಿಟ್ಟು ಹೋಗುವುದೇ, ಹೀಗಾಗಿ ನಮ್ಮ ಮುಂದಿನ ಪೀಳಿಗೆಗಾಗಿ ನಾವು ಕೆರೆ-ಕಟ್ಟೆಗಳನ್ನು ಸಂರಕ್ಷಿಸಬೇಕು ಎಂದು ರಾಮ್​ ವೀರ್​ ಹೇಳುತ್ತಾರೆ.

ದೇಶದಲ್ಲಿ ಪ್ರಾರಂಭವಾದ ಸ್ವಚ್ಛತಾ ಅಭಿಯಾನವು ಜಲಮೂಲಗಳ ಸಂರಕ್ಷಣೆಯನ್ನು ಕೈಗೊಳ್ಳಲು ಅವರನ್ನು ಇನ್ನಷ್ಟು ಪ್ರೇರೇಪಿಸಿತು. ಆದರೆ, ಕೆಲಸದೊಂದಿಗೆ ಅದನ್ನು ಸಮತೋಲನಗೊಳಿಸುವುದು ಕಷ್ಟಕರವಾದ ಕಾರಣ, ತಮ್ಮ ಕೆಲಸವನ್ನು ಬಿಟ್ಟು ಸಂರ್ಪೂಣವಾಗಿ ಕೆರೆಗಳನ್ನು ಸಂರಕ್ಷಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ.

2018ರಲ್ಲಿ ಕೆಲಸ ತ್ಯಜಿಸಿದಾಗ ಕುಟುಂಬದಿಂದ ತೀವ್ರ ವಿರೋಧ ಎದುರಿಸಬೇಕಾಯಿತು ಎಂದು ರಾಮ್​ವೀರ್​ ಒಪ್ಪಿಕೊಂಡಿದ್ದಾರೆ. ಮೊದಲು ಅವರು ತಮ್ಮ ಗ್ರಾಮದಲ್ಲಿ ವಾರಕ್ಕೊಮ್ಮೆ ಜಲ್​ ಚೌಪಾಲ್​ ಎಂಬ ಸಭೆಯನ್ನು ಆಯೋಜಿಸಲು ಪ್ರಾರಂಭಿಸಿದರು, ಇದು ಹತ್ತಿರದ ಕೊಳಗಳು ಮತ್ತು ಕೆರೆಗಳನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡುವ ಗುರಿಯನ್ನು ಹೊಂದಲಾಗಿತ್ತು.

ಮುಂದೆ ಅವರು ʼಸೇ ಅರ್ಥ್ʼ​ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಗ್ರೇಟರ್​ ನೋಯ್ಡಾದ ಚೌಗನ್​ಪುರ, ರೌನಿ, ಗಾಜಿಯಾಬಾದ್​ನ ಮೋರ್ಟಾ ಗ್ರಾಮ ಮತ್ತು ಸಹರಾನ್​ಪುರದ ನಾನಾ ಖೇಡಿ ಗ್ರಾಮ ಸೇರಿದಂತೆ ಯುಪಿಯ ಹಲವು ಪ್ರದೇಶಗಳು ಸೇರಿದಂತೆ ದೆಹಲಿಯ ಗಾಜಿಪುರ ಗ್ರಾಮದ ನೀರಿನಲ್ಲಿ ಬಿದ್ದಿರುವ ತ್ಯಾಜ್ಯವನ್ನು ಸ್ವಚ್ಛಗೊಳಿಸಿದ್ದಾರೆ.

ಇದಿಷ್ಟೇ ಅಲ್ಲದೇ ಭಾರತದ ಪಾಂಡ್​ ಮ್ಯಾನ್​ ಎಂದು ಕರೆಸಿಕೊಳ್ಳುವ ರಾಮ್​ ವೀರ್,​ ಪ್ರಧಾನಿ ನರೇಂದ್ರ ಮೋದಿಯವರಿಂದ ಮೆಚ್ಚುಗೆ ಪಡೆದಿದ್ದಾರೆ, ಅವರು ತಮ್ಮ ಮನ್​ ಕಿ ಬಾತ್​ನಲ್ಲಿ ಸಹ ಉಲ್ಲೇಖಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...