alex Certify ʼವೈದ್ಯೋ ನಾರಾಯಣೋ ಹರಿಃʼ ಮಾತಿಗೆ ಅನ್ವರ್ಥ ಈ ವೈದ್ಯ; ಗರ್ಭಿಣಿಯರ ಸೇವೆಗಾಗಿ ಉಚಿತ ಮೊಬೈಲ್​ ಕೊಡುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವೈದ್ಯೋ ನಾರಾಯಣೋ ಹರಿಃʼ ಮಾತಿಗೆ ಅನ್ವರ್ಥ ಈ ವೈದ್ಯ; ಗರ್ಭಿಣಿಯರ ಸೇವೆಗಾಗಿ ಉಚಿತ ಮೊಬೈಲ್​ ಕೊಡುಗೆ

ಬರ್ಸೂರ್‌ (ಛತ್ತೀಸ್‌ಗಢ): ವೈದ್ಯರು ಎಂದಾಕ್ಷಣ ಸಾಮಾನ್ಯವಾಗಿ ದುಡ್ಡು ಮಾಡುವವರು ಎನ್ನುವ ಕಲ್ಪನೆಯೇ ಬರುತ್ತದೆ. ಆದರೆ ಇದಕ್ಕಿಂತಲೂ ಮಿಗಿಲಾಗಿ ಜನಸೇವೆಯೇ ಜನಾರ್ದನ ಸೇವೆ ಎಂದುಕೊಂಡು ಬದುಕನ್ನು ಜನರಿಗಾಗಿ ಮೀಸಲು ಇಡುವ ವೈದ್ಯರು ಅಲ್ಲಲ್ಲಿ ಕಾಣಸಿಗುತ್ತಾರೆ. ಅಂಥವರಲ್ಲಿ ಒಬ್ಬರು ಛತ್ತೀಸ್‌ಗಢದ ಬರ್ಸೂರ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಗಣೇಶ್ ಬಾಬು.

ತಮ್ಮ ಸ್ವಂತ ಜೇಬಿನಿಂದ ಹಣವನ್ನು ಖರ್ಚು ಮಾಡುವ ಮೂಲಕ, ತಂತ್ರಜ್ಞಾನವನ್ನು ಬಳಸಿಕೊಂಡು ಗರ್ಭಿಣಿಯರಿಗೆ ಸಹಾಯ ಮಾಡುತ್ತಿದ್ದಾರೆ ಡಾ.ಗಣೇಶ್​. ತಾವು ಕರ್ತವ್ಯ ನಿರ್ವಹಿಸುತ್ತಿರುವ ಪ್ರದೇಶಗಳಲ್ಲಿ ಹೆರಿಗೆ ಆಸ್ಪತ್ರೆಗಳ ಕೊರತೆ ಇರುವ ಹಿನ್ನೆಲೆಯಲ್ಲಿ ವಿಷಾದ ವ್ಯಕ್ತಪಡಿಸಿರುವ ಈ ವೈದ್ಯರು, ಮಹಿಳೆಯರಿಗೆ ತಮ್ಮ ಸ್ವಂತ ಖರ್ಚಿನ ಮೂಲಕ ಮೊಬೈಲ್​ ಫೋನ್​ಗಳನ್ನು ಕೊಡಿಸಿ ಅದರ ಮೂಲಕ ಸಲಹೆಗಳನ್ನು ನೀಡುತ್ತಿದ್ದಾರೆ.

ಹೆರಿಗೆ ಸಮಯದಲ್ಲಿ ನೆರವಾಗಲು, ಹೆರಿಗೆಯ ನಂತರ ತಾಯಂದಿರಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಉತ್ತೇಜಿಸಲು ಮತ್ತು ನವಜಾತ ಶಿಶುಗಳಿಗೆ ರೋಗನಿರೋಧಕವನ್ನು ನೀಡುವ ಕುರಿತು ಅವರು ಈ ಮೊಬೈಲ್​ ಫೋನ್​ಗಳ ಮೂಲಕ ಸಹಾಯ ಮಾಡುತ್ತಿದ್ದಾರೆ. ದೂರದೂರದ ಪ್ರದೇಶಗಳಿಂದ ಗರ್ಭಿಣಿಯರು ಆಸ್ಪತ್ರೆಗೆ ಬರುವುದು ಕಷ್ಟವಾದಾಗ ಅವರು ಫೋನ್​ ಮೂಲಕವೇ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಹೆಚ್ಚಿನ ಗರ್ಭಿಣಿಯರಿಗೆ ಇದರಿಂದ ಅನುಕೂಲ ಆಗುತ್ತಿರುವ ನೆಮ್ಮದಿ ಡಾ.ಗಣೇಶ್​ ಅವರದ್ದು.

ಗರ್ಭಿಣಿಯರು ಈ ಮೊದಲು ಭಾರಿ ತೊಂದರೆಗೆ ಸಿಲುಕಿದ್ದರು. ಮೊಬೈಲ್​ ಫೋನ್​ನಿಂದಾಗಿ ಅವರ ಸಮಸ್ಯೆ ಬಗೆಹರಿದಿದೆ. ಅರಿವಿನ ಕೊರತೆಯಿಂದಾಗಿ ಗರ್ಭಿಣಿಯರ ಸಾವಿನ ಸಂಖ್ಯೆ ಹೆಚ್ಚುತ್ತಿತ್ತು. ಈಗ ಅದು ತಗ್ಗಿದೆ ಎನ್ನುತ್ತಾರೆ ಇವರು. ಇಂಥ ವೈದ್ಯರಿಂದಲೇ ವೈದ್ಯೋ ನಾರಾಯಣೋ ಹರಿಃ ಎಂಬ ಮಾತು ಬಂದಿದೆ ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...