alex Certify ರೈಲು ನಿಲ್ದಾಣಕ್ಕೆ ಸ್ಟೇಷನ್ ಮಾಸ್ಟರ್ ಆಗಿ ನೇಮಕಗೊಂಡ ಬೆಕ್ಕು……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ನಿಲ್ದಾಣಕ್ಕೆ ಸ್ಟೇಷನ್ ಮಾಸ್ಟರ್ ಆಗಿ ನೇಮಕಗೊಂಡ ಬೆಕ್ಕು……!

ನಕಾರಾತ್ಮಕ ಸುದ್ದಿಗಳಿಂದ ತುಂಬಿರುವ ಸಮಾಜದಲ್ಲಿ ಧನಾತ್ಮಕವಾಗಿರುವ ಸುದ್ದಿ ಸಿಗುವುದೇ ಕಷ್ಟ ಎನಿಸುವಂತೆ ಆಗಿದೆ. ಅಂಥದ್ದರಲ್ಲಿ ಒಂದು ಸುದ್ದಿ ವೈರಲ್​ ಆಗಿದ್ದು, ಅದು ನಿಮ್ಮನ್ನು ಸಂತೋಷಕ್ಕೆ ತಳ್ಳುತ್ತದೆ, ಮೊಗದಲ್ಲಿ ನಗುವಿನ ಅಲೆಯನ್ನು ಸೃಷ್ಟಿಸುತ್ತದೆ.
ಈ ಸುದ್ದಿ ಬಂದಿರುವುದು ತೈವಾನ್ ಮೆಟ್ರೋ ನಿಲ್ದಾಣದಿಂದ. ಈ ನಿಲ್ದಾಣಕ್ಕೆ ಗೌರವಾನ್ವಿತ ಸ್ಟೇಷನ್ ಮಾಸ್ಟರ್ ಆಗಿ ನೇಮಕಗೊಂಡ ಮಿಕಾನ್ ಬೆಕ್ಕಿನ ಕಥೆ ಇದಾಗಿದೆ.

ತೈವಾನ್​ ಕಾಹೋಸಿಂಗ್​ ಮೆಟ್ರೋದ 15 ನೇ ವರ್ಷದ ಸೇವೆಯನ್ನು ಆಚರಿಸಲು ವಿಶೇಷ ನೇಮಕಾತಿಯನ್ನು ಮಾಡಲಾಗಿದೆ. ಈ ನೇಮಕಾತಿಯಲ್ಲಿ ಮಿಕಾನ್ ಹೀರೋ ಎನಿಸಿಕೊಂಡಿದೆ. ಇದು ಈಗಾಗಲೇ ಯೂಟ್ಯೂಬ್‌ನಲ್ಲಿ ಸೆಲೆಬ್ರಿಟಿಯಾಗಿದೆ. ಇನ್​ಸ್ಟಾಗ್ರಾಮ್​ನಲ್ಲಿ 54 ಸಾವಿರ ಅನುಯಾಯಿಗಳನ್ನು ಹೊಂದಿರುವ ಮಿಕಾನ್​, ಜಿಂಜರ್ ಟ್ಯಾಬಿ ಕ್ಯಾಟ್ ಸಿಯಾಟೌ ಶುಗರ್ ರಿಫೈನರಿ ಮೆಟ್ರೋ ಸ್ಟೇಷನ್‌ನಲ್ಲಿ ಗೌರವಾನ್ವಿತ ಸ್ಟೇಷನ್ ಮಾಸ್ಟರ್ ಆಗಿ ನೇಮಕಗೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...