alex Certify ದಂಗಾಗಿಸುವಂತಿದೆ ಈ ʼಗೋಲ್ಡ್‌ ಮ್ಯಾನ್‌ʼ ಮೈ ಮೇಲಿರುವ ಆಭರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ ಈ ʼಗೋಲ್ಡ್‌ ಮ್ಯಾನ್‌ʼ ಮೈ ಮೇಲಿರುವ ಆಭರಣ

ಬಿಹಾರದಲ್ಲಿ ಏನಿದೆ ? ಎಂದು ಯಾರಾದರೂ ಪ್ರಶ್ನಿಸಿದರೆ, ಈಗ ಸಿಗುವ ಉತ್ತರ ಖಚಿತವಾಗಿಯೂ “ಚಿನ್ನ”! ಹೌದು, ಬಿಹಾರ ಇತ್ತೀಚಿಗೆ “ಚಿನ್ನ”ದ ವಿಚಾರವಾಗಿ ಗಮನ ಸೆಳೆಯುತ್ತಿರುವ ರಾಜ್ಯ. ಜಮಯಿನಲ್ಲಿ ದೇಶದ ಅತಿಹೆಚ್ಚಿನ ಚಿನ್ನದ ನಿಕ್ಷೇಪವಿದೆ. 230 ದಶಲಕ್ಷ ಟನ್‌ ಚಿನ್ನ ಈ ಪ್ರಾಂತ್ಯದಲ್ಲಿ ಪತ್ತೆಯಾಗಿದೆ ಎಂದು ಸುದ್ದಿಯಾಗಿತ್ತು.

ಈಗ ಬಿಹಾರದ “ಚಿನ್ನದ ಮನುಷ್ಯ” ದೇಶದ ಗಮನಸೆಳೆದಿದ್ದಾನೆ ! ಸರಿ ಸುಮಾರು 1.75 ಕೋಟಿ ಮೌಲ್ಯದ ಚಿನ್ನಾಭರಣ ಈತನನ್ನು ಅಲಂಕರಿಸಿವೆ. ತೂಕ ಬರೋಬ್ಬರಿ ಎರಡು ಕಿಲೋ ಇರಬಹುದು. ಈತನ ಹೆಸರು ಪ್ರೇಮ್‌ ಸಿಂಗ್.‌ ಬಿಹಾರ್‌ ಮೇ ಕಾ ಬಾ ಎಂದು ಈತನನ್ನು ಕೇಳಿದರೆ ಖಚಿತವಾಗಿಯೂ ಸೋನಾ ಬಾ ಸೋನಾ (ಚಿನ್ನ ಇದೆ ಚಿನ್ನ) ಎಂದು ಹೇಳಬಲ್ಲ.

BIG NEWS: ಮಾರ್ಗ ಮಧ್ಯೆಯೇ ಕೆಟ್ಟು ನಿಂತ ಮೆಮೋ ರೈಲು; ಪ್ರಯಾಣಿಕರ ಪರದಾಟ

ಪಟನಾದಲ್ಲಿರುವ ಈತನನ್ನು ಜನ ಬಿಹಾರದ ಗೋಲ್ಡ್‌ಮ್ಯಾನ್‌ ಎಂದೇ ಗುರುತಿಸುತ್ತಾರೆ. ಕತ್ತು ಮುಚ್ಚಿ ಹೋಗುವಷ್ಟು ದಪ್ಪದ ಸರವನ್ನು ಸುತ್ತಿಕೊಂಡಿದ್ದಾರೆ. ಹತ್ತು ಬೆರಳುಗಳಲ್ಲೂ ದಪ್ಪದಪ್ಪದ ಚಿನ್ನದ ಉಂಗುರಗಳು, ಎರಡೂ ಕೈಗಳಿಗೆ ದಪ್ಪದ ಬ್ರೇಸ್‌ಲೆಟ್‌ಗಳು ಗಮನ ಸೆಳೆಯುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...