alex Certify ಬೆಲೆ ಏರಿಕೆ ಎಫೆಕ್ಟ್; ಮೆಕ್​ಡೊನಾಲ್ಡ್​​ ಬರ್ಗರ್​ನಲ್ಲಿ ಟೊಮ್ಯಾಟೋಗೆ ಕೊಕ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಲೆ ಏರಿಕೆ ಎಫೆಕ್ಟ್; ಮೆಕ್​ಡೊನಾಲ್ಡ್​​ ಬರ್ಗರ್​ನಲ್ಲಿ ಟೊಮ್ಯಾಟೋಗೆ ಕೊಕ್…..!

ಟೊಮ್ಯಾಟೋ ಸಂಗ್ರಹಣೆಯಲ್ಲಿ ತೊಡಕು ಉಂಟಾದ ಹಿನ್ನೆಲೆಯಲ್ಲಿ ಮೆಕ್​ಡೊನಾಲ್ಡ್​​ ಇಂಡಿಯಾ – ತನ್ನ ಅಡುಗೆ ಕೋಣೆಯಿಂದ ಟೊಮ್ಯಾಟೋಗೆ ತಾತ್ಕಾಲಿಕ ಕೊಕ್​ ನೀಡಿದೆ. ಟೊಮ್ಯಾಟೋ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಮೆಕ್​ಡಿ ಕಂಪನಿಯು ಎಲ್ಲಿಯೂ ಸ್ಪಷ್ಟವಾಗಿ ಹೇಳಿಲ್ಲ.

ಪ್ರಸ್ತುತ ದೇಶದಲ್ಲಿ ಟೊಮ್ಯಾಟೋ ಬೆಲೆಯು ಗಗನಕ್ಕೇರಿದೆ. ಬೆಳೆಯ ಗುಣಮಟ್ಟ, ಕೊರತೆ. ದಾಸ್ತಾನು ಸಮಸ್ಯೆ ಹೀಗೆ ನಾನಾ ಕಾರಣಗಳಿಂದಾಗಿ ದೆಹಲಿ , ಕೋಲ್ಕತ್ತಾ ಹಾಗೂ ಉತ್ತರ ಪ್ರದೇಶಗಳಂತಹ ನಗರಗಳಲ್ಲಿ ಟೊಮ್ಯಾಟೋ ಬೆಲೆ ಪ್ರತಿ ಕೆಜಿಗೆ 150 ರೂಪಾಯಿ ಆಗಿದೆ.

ಉತ್ತರ ಭಾರತ ಹಾಗೂ ಪೂರ್ವ ಭಾರತದ ಮೆಕ್​ಡೊನಾಲ್ಡ್​ ಮಳಿಗೆಗಳಲ್ಲಿ ಮಾತ್ರ ಇನ್ಮೇಲೆ ನಿಮಗೆ ಮೆಕ್​ಡಿ ಉತ್ಪನ್ನಗಳಲ್ಲಿ ಟೊಮ್ಯಾಟೋ ಇರೋದಿಲ್ಲ. ಈ ವಿಚಾರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿಯು, ಆಹಾರದ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಉನ್ನತ ಮಟ್ಟದಲ್ಲಿ ಇಡುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದೆ.

ನಮ್ಮ ಸಾಕಷ್ಟು ಪ್ರಯತ್ನದ ಹೊರತಾಗಿಯೂ ಉತ್ತಮ ಗುಣಮಟ್ಟದ ಟೊಮ್ಯಾಟೋಗಳನ್ನು ಹೊಂದಲು ನಮಗೆ ಸಾಧ್ಯವಾಗಲಿಲ್ಲ. ಇದೊಂದು ತಾತ್ಕಾಲಿಕ ಸಮಸ್ಯೆಯಾಗಿದೆ ಎಂದು ಗ್ರಾಹಕರಿಗೆ ಮೆಕ್​ಡಿ ಕಂಪನಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...