alex Certify ʼಸ್ಪೇನ್‌ʼ ನಲ್ಲಿ ಹೀಗೊಂದು ವಿಚಿತ್ರ ಟೊಮ್ಯಾಟೋ ಸ್ಪರ್ಧೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸ್ಪೇನ್‌ʼ ನಲ್ಲಿ ಹೀಗೊಂದು ವಿಚಿತ್ರ ಟೊಮ್ಯಾಟೋ ಸ್ಪರ್ಧೆ

ಸ್ಪೇನ್‌ ಎಂದ ಕೂಡಲೇ ನೆನಪಾಗುವುದು ‘ಗೂಳಿ ಕಾಳಗ’. ಇತ್ತೀಚೆಗೆ ಯುವಕರ ಮನಸ್ಸಲ್ಲಿ ಸ್ಪೇನ್‌ ಎಂದರೆ ಜ್ಞಾಪಕಕ್ಕೆ ಬರುವುದು ’ ಲಾ ಟೊಮ್ಯಾಟಿನೊ’ ಉತ್ಸವ. ಒಬ್ಬರಿಗೊಬ್ಬರು ಟೊಮ್ಯಾಟೊ ಎರಚಿಕೊಂಡು, ಊರಿಗೆ ಊರೇ ಟೊಮ್ಯಾಟೊ ರಸದಲ್ಲಿ ಮುಳುಗಿ ಏಳುವ ವಿಚಿತ್ರ ಆಚರಣೆ.

ಆದರೆ ಈ ಬಾರಿ ಸ್ಪೇನ್‌ ರೈತರು ’ ಅತ್ಯಂತ ಕೆಟ್ಟದಾಗಿ, ವಿಕೃತವಾಗಿ ಕಾಣುವ ಟೊಮ್ಯಾಟೊ’ ಎಂಬ ಸ್ಪರ್ಧೆ ನಡೆಸಿ ಸುದ್ದಿಯಲ್ಲಿದ್ದಾರೆ. ಮರ್ಮಂಡಿ ತಳಿಯ ವಿಕೃತ ಆಕಾರದ ಟೊಮ್ಯಾಟೊಗಳ ಸ್ಪರ್ಧೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಈ ಸ್ಪರ್ಧೆಯಲ್ಲಿ ಗೆದ್ದಿರುವ ಮರಿಸೊಲ್‌ ಮತ್ತು ವಿನ್‌ಸೆಂಟಿ ಮಾರ್ಟಿನೆಜ್‌ ಪ್ರಕಾರ ಟೊಮ್ಯಾಟೊ ವಿಕಾರ ಆಕೃತಿಗೆ ತಿರುಗಲು ಕಾರಣ ಅವುಗಳ ಬೀಜಗಳನ್ನು ದುಂಬಿಗಳು ಹೊತ್ತೊಯ್ಯುವಲ್ಲಿ ವ್ಯತ್ಯಾಸ ಆಗಿರುವ ಕಾರಣವಂತೆ. ಟೊಮ್ಯಾಟೊಗಳ ಆಕಾರ ಕೆಡುವುದು ಅಪರೂಪ, ಅದು ಆದಾಗಲೇ ಈ ಸ್ಪರ್ಧೆ ಆಯೋಜನೆಗೊಂಡು ಬಹುಮಾನ ಸಿಕ್ಕಿದೆ. ವಿಶೇಷವಾಗಿ ಬೆಳೆಯುವುದೇನು ಇಲ್ಲ ಎಂದಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಖಾತ್ರಿಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದಿಂದ ದೇಶಾದ್ಯಂತ ಧರಣಿ

ಅಂದಹಾಗೆ, ಸ್ಪರ್ಧೆಯ ವಿಜೇತರಿಗೆ ನೀಡುವ ಬಹುಮಾನ ಏನು ಗೊತ್ತಾ? ಅತಿ ದುಬಾರಿ ಎನಿಸಿರುವ ’ಹಂದಿಯ ಕಾಲಿನ ಮಾಂಸ’ (ಐಬೀರಿಯನ್‌ ಹ್ಯಾಮ್‌)!

— NowThis (@nowthisnews) September 14, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...