alex Certify ಹೊಟ್ಟೆ, ಸೊಂಟದ ಸುತ್ತಲಿನ ಬೊಜ್ಜು ಕರಗಲು ಈ ಆಯಿಲ್ ನಿಂದ ಮಾಡಿ ಮಸಾಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆ, ಸೊಂಟದ ಸುತ್ತಲಿನ ಬೊಜ್ಜು ಕರಗಲು ಈ ಆಯಿಲ್ ನಿಂದ ಮಾಡಿ ಮಸಾಜ್

ದೇಹದಲ್ಲಿ ಕೊಬ್ಬು ಹೆಚ್ಚಾದಾಗ ತೊಡೆ, ಹೊಟ್ಟೆ, ಸೊಂಟದ ಬಳಿ ಬೊಜ್ಜು ಬೆಳೆಯುತ್ತದೆ. ಇದು ಮುಜುಗರಕ್ಕೆ ಕಾರಣವಾಗಬಹುದು. ಇದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಎಸೆನ್ಷಿಯಲ್ ಆಯಿಲ್ ನಿಂದ ಮಸಾಜ್ ಮಾಡಿ.

*ರೋಸ್ಮರಿ ಎಸೆನ್ಷಿಯಲ್ ಆಯಿಲ್ : ಇದು ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಹಾಗಾಗಿ ಇದಕ್ಕೆ ತೆಂಗಿನೆಣ್ಣೆ ಅಥವಾ ಆಲಿವ್ ಆಯಿಲ್ ನ್ನು ಮಿಕ್ಸ್ ಮಾಡಿ ಇದನ್ನು ಬೊಜ್ಜು ಬೆಳೆದ ಸ್ಥಳದಲ್ಲಿ ಹಚ್ಚಿ ಮಸಾಜ್ ಮಾಡುವುದರಿಂದ ಅಲ್ಲಿ ರಕ್ತ ಸಂಚಾರ ಹೆಚ್ಚಾಗುತ್ತದೆ. ಬೊಜ್ಜು ಕರಗುತ್ತದೆ.

*ಕಿತ್ತಳೆ ಎಸೆನ್ಷಿಯಲ್ ಆಯಿಲ್ : ಇದು ಕೂಡ ರಕ್ತ ಸಂಚಾರವನ್ನು ಹೆಚ್ಚಿಸುವುದರಿಂದ ಇದನ್ನು ಪೀಡಿತ ಸ್ಥಳದಲ್ಲಿ ಹಚ್ಚಿ ಮಸಾಜ್ ಮಾಡಿ. ಇದರಿಂದ ರಕ್ತ ಸಂಚಾರ ಸರಾಗವಾಗಿ ಆಗಿ ಬೊಜ್ಜು ಕರಗಿ ಹೋಗುತ್ತದೆ.

*ಫೆನ್ನಲ್ ಎಸೆನ್ಷಿಯಲ್ ಆಯಿಲ್ : ಇದು ದೇಹದಿಂದ ವಿಷವನ್ನು ಹೊರಹಾಕುವಿಕೆಯನ್ನು ಹೆಚ್ಚಿಸುತ್ತದೆ. ಇದು ಕೊಬ್ಬನ್ನು ಕಳೆದುಕೊಳ್ಳಲು ಸಹಕಾರಿಯಾಗಿದೆ. ಹಾಗಾಗಿ ಇದನ್ನು ಬಳಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...