alex Certify ಕುರ್ತಾ, ಪೈಜಾಮದಲ್ಲಿ ಅದ್ಭುತ ನೃತ್ಯ: ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುರ್ತಾ, ಪೈಜಾಮದಲ್ಲಿ ಅದ್ಭುತ ನೃತ್ಯ: ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ

ಸಾಮಾಜಿಕ ಮಾಧ್ಯಮದಲ್ಲಿ ಈಗ ನೃತ್ಯ, ಸಂಗೀತಗಳೇ ಹೆಚ್ಚು ವೈರಲ್​ ಆಗುತ್ತಿವೆ. ಅಂಥದ್ದೇ ಒಂದು ಸುಂದರ ವಿಡಿಯೋದ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ಈಗ ವೈರಲ್ ಆಗಿರುವ ವಿಡಿಯೋವನ್ನು ಸಂದೀಪ್ ಕುಮಾರ್ ಎಂಬ ಬಳಕೆದಾರರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಕಿರು ವಿಡಿಯೋದಲ್ಲಿ ಕುರ್ತಾ ಮತ್ತು ಪೈಜಾಮವನ್ನು ಧರಿಸಿರುವ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಹಾರ್ಡಿ ಸಂಧು ಅವರ ಜನಪ್ರಿಯ ಟ್ರ್ಯಾಕ್‌ಗೆ ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ಇದು ಕೇವಲ ನೃತ್ಯ ಪ್ರದರ್ಶನವಾಗಿರಲಿಲ್ಲ. ಬದಲಿಗೆ ಅಭಿನಯಗಳ ಅನಾವರಣವಾಗಿತ್ತು.

ಇದರ ವಿಡಿಯೋಗೆ ನೆಟ್ಟಿಗರು ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನೃತ್ಯಗಾರನ ಅಭಿವ್ಯಕ್ತಿಗಳು ಮತ್ತು ಅಭಿನಯಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಯಾರಲ್ಲಿ ಯಾವ ರೀತಿಯ ಕಲೆ ಅಡಗಿ ಇರುತ್ತದೆ ಎಂದು ತಿಳಿಯುವುದಿಲ್ಲ. ಈ ವ್ಯಕ್ತಿಯನ್ನು ಸುಮ್ಮನೇ ನೋಡಿದರೆ ಇಷ್ಟು ಅದ್ಭುತವಾಗಿ ನೃತ್ಯ ಮಾಡಲು ಸಾಧ್ಯ ಎಂದು ಎನಿಸುವುದೇ ಇಲ್ಲ ಎಂದು ಅನೇಕ ಮಂದಿ ಕಮೆಂಟ್​ ಮೂಲಕ ಹೇಳಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...