alex Certify ಲ್ಯಾಪ್​ ಟಾಪ್ ಆರ್ಡರ್‌ ಮಾಡಿದ್ದವರಿಗೆ ಬಂದಿದ್ದೇನು ಅಂತ ತಿಳಿದ್ರೆ ಅಚ್ಚರಿಪಡ್ತೀರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲ್ಯಾಪ್​ ಟಾಪ್ ಆರ್ಡರ್‌ ಮಾಡಿದ್ದವರಿಗೆ ಬಂದಿದ್ದೇನು ಅಂತ ತಿಳಿದ್ರೆ ಅಚ್ಚರಿಪಡ್ತೀರಿ…!

ಮಂಗಳೂರು: ಆನ್‌ಲೈನ್​ನಲ್ಲಿ ಒಂದು ಆರ್ಡರ್​ ಮಾಡಿದಾಗ ಇನ್ನೊಂದು ಬರುವುದು ಆಗಾಗ್ಗೆ ನಡೆದೇ ಇದೆ. ಮಂಗಳೂರಿನಲ್ಲಿ ನಡೆದ ಇಂಥದ್ದೇ ಒಂದು ಘಟನೆ ನಡೆದಿದೆ. ಮಂಗಳೂರಿನ ಚಿನ್ಮಯ ರಮಣ ಎಂಬವರು ಗೇಮಿಂಗ್ ಲ್ಯಾಪ್‌ಟಾಪ್ ಆರ್ಡರ್​ ಮಾಡಿದ್ದರೆ, ಅವರ ಮನೆಗೆ ಬಂದದ್ದು ಬೃಹತ್​ ಕಲ್ಲು!

ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ದಿವಾಲಿ ಸೇಲ್​ನಲ್ಲಿ ಚಿನ್ಮಯ ಅವರು​ ಗೇಮಿಂಗ್ ಲ್ಯಾಪ್‌ಟಾಪ್ ಆರ್ಡರ್​ ಮಾಡಿದ್ದರು. ಅದು ಬರುವುದನ್ನೇ ಕಾಯುತ್ತಿದ್ದರು. ಆದರೆ ಪಾರ್ಸೆಲ್​ ತೆಗೆದು ನೋಡಿದಾಗಲೇ ತಿಳಿದದ್ದು, ಅದು ಲ್ಯಾಪ್​ಟಾಪ್​ ಅಲ್ಲ, ಬದಲಿಗೆ ದೊಡ್ಡ ಕಲ್ಲು ಎಂದು.

ಈ ವಿಚಾರವನ್ನು ಅವರೇ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಸ್ನೇಹಿತನಿಗೆಂದು ಅಕ್ಟೋಬರ್ 15 ರಂದು Asus TUF Gaming F15 ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಆರ್ಡರ್ ಮಾಡಿದ್ದೆ. ನಂತರ ಮನೆಗೆ ಬಂದ ಪಾರ್ಸೆಲ್​ ನೋಡಿದಾಗ ಅದರಲ್ಲಿ ಕಲ್ಲು ಇತ್ತು. ನಂತರ ಫ್ಲಿಪ್​ಕಾರ್ಟ್​ನ ಕಸ್ಟಮರ್​ ಕೇರ್​ಗೆ ದೂರು ನೀಡಿದ್ದು, ಸಂಪೂರ್ಣ ಹಣವನ್ನು ಹಿಂದಿರುಗಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...