alex Certify ಕಳ್ಳತನದ ಸಾಕ್ಷ್ಯ ನಾಶ ಮಾಡಲು ಹೋದವ ಕಾಡಿಗೆ ಬೆಂಕಿ ಇಟ್ಟ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳತನದ ಸಾಕ್ಷ್ಯ ನಾಶ ಮಾಡಲು ಹೋದವ ಕಾಡಿಗೆ ಬೆಂಕಿ ಇಟ್ಟ….!

ಡೀಸೆಲ್​ ಕಳವು ಮಾಡಿದಾತನೊಬ್ಬ ಸಾಕ್ಷ್ಯ ನಾಶ ಮಾಡಲು ಹೋಗಿ ಅಪಾರ ಮೌಲ್ಯದ ಕಾಡನ್ನೇ ನಾಶ ಮಾಡಿದ್ದು, ಆತನಿಗೆ ಕೋರ್ಟ್​ ಜೈಲು ಶಿಕ್ಷೆ ವಿಧಿಸಿದೆ.

ಈ ಘಟನೆ ನಡೆದಿರುವುದು, ಆಸ್ಟ್ರೇಲಿಯಾದಲ್ಲಿ. ವಿಕ್ಟೋರಿಯಾದ ಹ್ಯಾಂಗಿಂಗ್​ ರಾಕ್​ ಬಳಿ ಲಾಗಿಂಗ್​ ಅಗೆಯುವ ಯಂತ್ರದಿಂದ 2019 ರಲ್ಲಿ ವ್ಯಕ್ತಿ ತನ್ನ ಸಹಚರನೊಂದಿಗೆ 200 ಲೀಟರ್​ ಡೀಸೆಲ್​ ಇಂಧನವನ್ನು ಕದ್ದಿದ್ದ.

ಆ ಪ್ರದೇಶದಿಂದ ಹೊರಡುವ ಮೊದಲು ಡೀಸೆಲ್​ ಕಳ್ಳತನದ ಸುಳಿವು ಸಿಗಬಾರದೆಂದು ಆತ
ಸಿಗರೇಟ್​ ಲೈಟರ್​ನ ಸಹಾಯದಿಂದ ಉಳಿದ ಇಂಧನವನ್ನು ಉರಿಸಿದ್ದ. ಇದು ನಿಯಂತ್ರಣಕ್ಕೆ ಸಿಗದೇ ಕಾಡ್ಗಿಚ್ಚಿಗೆ ಕಾರಣವಾಯಿತು. ಆ ಪ್ರದೇಶದ ಸುಮಾರು 1,042 ಹೆಕ್ಟೇರ್​ ಅರಣ್ಯ ನಾಶಪಡಿಸಿತು. ಹಾನಿಯ ಅಂದಾಜು ವೆಚ್ಚವು 1.1ರಿಂದ 1.7 ಮಿಲಿಯನ್​ ಡಾಲರ್​ಗಳೆಂದು ಅಂದಾಜಿಸಲಾಗಿದೆ.

ಈ ಹಾನಿಯನ್ನು ಆ ಇಂಧನ ಕಳ್ಳ ಒಪ್ಪಿಕೊಂಡ. ಆದರೆ, ತನ್ನ ಉದ್ದೇಶದ ಬಗ್ಗೆಯೂ ಸ್ಪಷ್ಟನೆ ನೀಡಿ ವಿಷಾದಿಸಿದ. ಆದರೆ, ಕೋರ್ಟ್​ ಆತನ ಅಹವಾಲು ತಿರಸ್ಕರಿಸಿದೆ.

ಈ ಕಳ್ಳತನ ಮಾಡುವಾಗ ಆ ವ್ಯಕ್ತಿಗೆ ಕೇವಲ 17 ವರ್ಷ. ಅಪರಾಧದ ಸಮಯದಲ್ಲಿ ಅಪ್ರಾಪ್ತನಾಗಿದ್ದ ಕಾರಣ ನ್ಯಾಯಾಧೀಶರು ಆತನಿಗೆ 12 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದು, ಹಾಗೆಯೇ ಐದು ತಿಂಗಳಲ್ಲಿ ಪೆರೋಲ್​ಗೆ ಅರ್ಹನಾಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...