alex Certify ಮೂತ್ರ ವಿಸರ್ಜಿಸುತ್ತಿರುವಾಗಲೇ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂತ್ರ ವಿಸರ್ಜಿಸುತ್ತಿರುವಾಗಲೇ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡ ಭೂಪ…!

ನ್ಯೂಯಾರ್ಕ್‌ನ ಜನಪ್ರಿಯ ಪ್ರದೇಶ ಟೈಮ್ಸ್‌ಸ್ಕ್ವೇರ್‌ ನಲ್ಲಿನ ಸುರಂಗಮಾರ್ಗದ ಮೆಟ್ರೊ ನಿಲ್ದಾಣದಲ್ಲಿ 39 ವರ್ಷದ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿದ್ದ.

ಹಾಡು ಹೇಳಿಕೊಂಡು ಹಾಯಾಗಿ ಮೂತ್ರ ವಿಸರ್ಜಿಸುತ್ತಿದ್ದಾಗಲೇ ಆತನ ಜೇಬಿನಿಂದ ಗುಂಡು ಹಾರಿಕೊಂಡು ತೊಡೆ ಸೀಳಿತ್ತು. ಪ್ರಜ್ಞೆ ತಪ್ಪಿದ ವ್ಯಕ್ತಿ ಸ್ಥಳದಲ್ಲೇ ಕುಸಿದು ಬಿದ್ದಿದ್ದ !

ನೆಚ್ಚಿನ ಶ್ವಾನದ ಹೆಸರಿಗೆ 15 ಕೋಟಿ ರೂ. ಆಸ್ತಿ ಬರೆದ ಮಾಡೆಲ್…!

ಇಂಥದ್ದೊಂದು ವಿಚಿತ್ರ ಘಟನೆಯು 40ನೇ ಸ್ಟ್ರೀಟ್‌ನಲ್ಲಿ ಜರುಗಿದೆ. ಮಧ್ಯಾಹ್ನ 12.20ರ ಸುಮಾರಿಗೆ ಹಸಿರು ಟೋಪಿ ಧರಿಸಿದ್ದ ವ್ಯಕ್ತಿಯೊಬ್ಬ ನಿಲ್ದಾಣ ಪ್ರವೇಶಿಸಿದ್ದಾನೆ. ಕೆಲವು ನಿಮಿಷಗಳ ಬಳಿಕ ಆತನ ಬಳಿಗೆ ಗುಲಾಬಿ ಬಣ್ಣದ ಮುಖ ಮುಚ್ಚುವ ಶರ್ಟ್‌ ಧರಿಸಿದ್ದ ಮತ್ತೊಬ್ಬ ವ್ಯಕ್ತಿ ಬಂದು ಏನನ್ನೋ ಕೊಡುತ್ತಾನೆ. ಬಳಿಕ ಆತ ಗಾಬರಿಯಿಂದ ಹಿಂದಿರುಗುತ್ತಾನೆ ಎನ್ನುವುದು ಮಾತ್ರವೇ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

‘ನಟಿಯೊಂದಿಗೆ ನಟ ಪವನ್ ಕಲ್ಯಾಣ್ ಸಂಬಂಧ’; ವಿವಾದಿತ ಹೇಳಿಕೆ ಹಿಂಪಡೆದ ವೈಎಸ್‌ಆರ್‌ಸಿ ಶಾಸಕ

ಗುಂಡು ಹಾರಿಸಿಕೊಂಡು ಮಾರ್ಗ ಮಧ್ಯೆ ಬಿದ್ದಿದ್ದು ದೃಶ್ಯಾವಳಿಗಳಲ್ಲಿರುವ ಗುಲಾಬಿ ಬಣ್ಣದ ಶರ್ಟ್‌ ಧರಿಸಿದ ವ್ಯಕ್ತಿಯೇ. ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ನಿಲ್ದಾಣದ ಭದ್ರತಾ ಅಧಿಕಾರಿ ಮೈಕೆಲ್‌ ಬಾಯುಯಿಯಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...