alex Certify ಗರ್ಭಿಣಿಯರ ಯಾತನೆ ಅರಿಯಲು ಹೀಗೊಂದು ಪ್ರಯೋಗ ಮಾಡಿದ ಟಿಕ್‌ ಟಾಕರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯರ ಯಾತನೆ ಅರಿಯಲು ಹೀಗೊಂದು ಪ್ರಯೋಗ ಮಾಡಿದ ಟಿಕ್‌ ಟಾಕರ್

ಯಾವುದೇ ಹೆಂಗಸಿನ ಬದುಕಿನಲ್ಲೂ ಮಹತ್ವದ ಘಟ್ಟವೆಂದರೆ ಮಗುವಿಗೆ ಜನ್ಮ ನೀಡುವುದು. ಈ ವೇಳೆಯಲ್ಲಿ ಅವರು ಅನುಭವಿಸುವ ನೋವು ಮತ್ತು ಎಲ್ಲಾ ಸವಾಲುಗಳನ್ನು ಎದುರಿಸಲು ತೋರುವ ಮನೋಬಲ ಬಹಳ ದೊಡ್ಡದು.

ಹೆಂಗಸರು ಗರ್ಭಧಾರಣೆ ವೇಳೆ ಅನುಭವಿಸುವ ದೈಹಿಕ ಹಾಗೂ ಮಾನಸಿಕ ನೋವುಗಳನ್ನು ಗಂಡಸರು ಯಾವ ಮಟ್ಟದಲ್ಲಿ ಅರ್ಥ ಮಾಡಿಕೊಳ್ಳಬಲ್ಲರು ಎಂಬ ಪ್ರಶ್ನೆಗಳು ಆಗಾಗ ಏಳುತ್ತಲೇ ಇರುತ್ತವೆ.

ಇದಕ್ಕೆ ಪ್ರತಿಕ್ರಿಯೆ ನೀಡಲು ಮುಂದಾದ ಜನಪ್ರಿಯ ಟಿಕ್‌ಟಾಕರ್‌ ಮೈಟ್ಲಾಂಡ್ ಹಾನ್ಲೇ, ದೊಡ್ಡದೊಂದು ಕಲ್ಲಂಗಡಿಯನ್ನು ತಮ್ಮ ಹೊಟ್ಟೆಯ ಸುತ್ತಲೂ ಸುತ್ತಿಕೊಂಡಿದ್ದಾರೆ. ಇದರೊಂದಿಗೆ ಎರಡು ಕರ್ಬೂಜಗಳನ್ನು ಎದೆಗೆ ಹಾಕಿಕೊಂಡಿದ್ದಾರೆ. ಈ ಮೂಲಕ ಗರ್ಭಿಣಿ ಹೆಂಗಸಿಗೆ ಆಗಬಹುದಾದ ಮೈಭಾರವನ್ನು ಮರುಸೃಷ್ಟಿಸಿದ್ದಾರೆ ಹಾನ್ಲೇ.

ಹೀಗಿದೆ ನೋಡಿ ನಿಮ್ಮ ಇಂದಿನ ರಾಶಿ ಭವಿಷ್ಯ

ಈ ಮೂಲಕ ಮಗುವಿನ ಪ್ರಸವ ಸನಿಹವಾಗುತ್ತಲೇ ಮಹಿಳೆಗೆ ಅದೇನೆಲ್ಲಾ ಯಾತನೆಗಳಾಗಬಹುದೆಂಬ ಅಂದಾಜು ನೀಡಲು ಮುಂದಾದ ಹಾನ್ಲೇಗೆ ಈ ಹೆಚ್ಚುವರಿ ತೂಕ ಹೊತ್ತುಕೊಂಡು ಹಾಸಿಗೆ ಮೇಲಕ್ಕೇಳಲೂ ಆಗಲಿಲ್ಲವಂತೆ…!

ಇದಲ್ಲದೇ, ನೆಲದ ಮೇಲೆ ಕುಳಿತು ಮೇಲಕ್ಕೇಳುವ ವೇಳೆ, ಬಾತ್‌ರೂಂಗೆ ತೆರಳುವ ಸಂದರ್ಭದಲ್ಲಿ, ಶೂ ಧರಿಸುವ ವೇಳೆಯೆಲ್ಲಾ ಹಾನ್ಲೇಗೆ ಈ ಸೆಟ್‌ಅಪ್‌ನಿಂದಾಗಿ ಭಾರೀ ಕಷ್ಟವಾಗುತ್ತಿತ್ತಂತೆ. ಆ ವೇಳೆಯಲ್ಲಿ ಹಾಸಿಗೆ ಮೇಲೆ ಮಲಗಿ ತಮ್ಮ ಕಾಲುಗಳನ್ನು ಮಾತ್ರವೇ ಅಲುಗಾಡಿಸಲು ಆಗುತ್ತಿತ್ತು ಎಂದು ಹಾನ್ಲೇ ಹೇಳಿಕೊಂಡಿದ್ದಾರೆ.

ಗರ್ಭಧಾರಣೆ ಅವಧಿಯಲ್ಲಿ ಹೆಂಗಸರು ಅನುಭವಿಸುವ ಸವಾಲುಗಳ ಪರಿಚಯ ಮಾಡಿಕೊಡುವ ಈ ವಿಡಿಯೋಗೆ ಟಿಕ್‌ಟಾಕ್‌ನಲ್ಲಿ 17 ದಶಲಕ್ಷಕ್ಕೂ ಹೆಚ್ಚಿನ ವೀವ್ಸ್ ಸಿಕ್ಕಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...