alex Certify ಮಗಳಿಗೆ ಕಿಡ್ನಿ ಅವಶ್ಯವಿದೆ ಎಂದು ಕಾರಿನ ಹಿಂದೆ ಬರೆದುಕೊಂಡ ಅಪ್ಪ: ಅಂತೂ ಸಿಕ್ಕರು ದಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳಿಗೆ ಕಿಡ್ನಿ ಅವಶ್ಯವಿದೆ ಎಂದು ಕಾರಿನ ಹಿಂದೆ ಬರೆದುಕೊಂಡ ಅಪ್ಪ: ಅಂತೂ ಸಿಕ್ಕರು ದಾನಿಗಳು

ವಾಹನಗಳ ಮುಂದೆ ಅಥವಾ ಹಿಂಭಾಗದಲ್ಲಿ ತಮ್ಮ ಪ್ರೀತಿ ಪಾತ್ರರ ಹೆಸರೋ ಅಥವಾ ಅವರ ಕೃಪೆ, ಇವರ ಆಶೀರ್ವಾದ ಎಂದೆಲ್ಲಾ ಬರೆದುಕೊಳ್ಳುವುದು ಉಂಟು. ಆದರೆ ಮಗಳಿಗೆ ಮೂತ್ರಪಿಂಡದ ಸಮಸ್ಯೆಯಿಂದಾಗಿ ಸಾವು ನೋವಿನ ನಡುವೆ ಒದ್ದಾಡುತ್ತಿರುವಾಗ ತಂದೆಯೊಬ್ಬ ಮೂತ್ರಪಿಂಡದ ಅಗತ್ಯವಿದೆ ಎಂದು ಕಾರಿನ ಹಿಂಭಾಗದಲ್ಲಿ ಬರೆದುಕೊಂಡಿರುವ ಫೋಟೋ ಒಂದು ವೈರಲ್​ ಆಗುತ್ತಿದೆ.

ಫೋಟೋದಲ್ಲಿ ಈ ರೀತಿ ಬರೆದುಕೊಂಡಿರುವುದನ್ನು ಗಮನಿಸಬಹುದು. ನಂತರ ಅದರ ಮೇಲೆ ಗಾಟ್​ (ಸಿಕ್ಕಿದೆ) ಎಂದು ಬರೆದುಕೊಳ್ಳಲಾಗಿದೆ. ಮೂತ್ರಪಿಂಡ ಸಿಗುವುದಕ್ಕೆ ಹಾರೈಸಿದ ನಿಮಗೆ ಧನ್ಯವಾದ ಎಂದು ಕೆಳಗಡೆ ಬರೆಯಲಾಗಿದ್ದು, ಅದರ ಫೋಟೋ ಈಗ ವೈರಲ್​ ಆಗುತ್ತಿದೆ.

ಟ್ವಿಟರ್‌ನಲ್ಲಿ ಡ್ಯೂಡ್ಸ್ ಪೋಸ್ಟಿಂಗ್ ದೇರ್ ಡಬ್ಲ್ಯೂ ಎಂಬ ಪುಟದಲ್ಲಿ ಈ ಪೋಸ್ಟ್​ ಶೇರ್​ ಮಾಡಲಾಗಿದೆ. ಧನ್ಯವಾದ ವಿಲ್ಲಿ! ನಿಮ್ಮ ನಿಸ್ವಾರ್ಥ ಉಡುಗೊರೆಗಾಗಿ ಎಂದು ಕೆಳಗೆ ಬರೆದಿರುವುದನ್ನು ಇದರಲ್ಲಿ ಕಾಣಬಹುದು. ಬಹುಶಃ ಈ ಕಾರಿನಲ್ಲಿರುವ ಸಂದೇಶ ನೋಡಿ ಯಾರೋ ವಿಲ್ಲಿ ಎನ್ನುವವರು ಇದನ್ನು ನೀಡಿರಬಹುದು ಎಂದು ಊಹಿಸಲಾಗಿದೆ. ಒಟ್ಟಿನಲ್ಲಿ ಮಗಳ ಜೀವ ಉಳಿದದ್ದಕ್ಕೆ ನೆಟ್ಟಿಗರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಎಲ್ಲಾ ಪ್ರಯತ್ನಗಳು ಕೈಬಿಟ್ಟಾಗ ಹೀಗೂ ಒಂದು ಪ್ರಯತ್ನ ಮಾಡಬಹುದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...