alex Certify ಫ್ಲೈಟ್‌ನಲ್ಲಿ ಒಬ್ಬನೇ ಪ್ರಯಾಣಿಕನಾದ ’ವಿಚಿತ್ರಾನುಭವ’ ಹಂಚಿಕೊಂಡ ಟಿಕ್‌ ಟಾಕರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಲೈಟ್‌ನಲ್ಲಿ ಒಬ್ಬನೇ ಪ್ರಯಾಣಿಕನಾದ ’ವಿಚಿತ್ರಾನುಭವ’ ಹಂಚಿಕೊಂಡ ಟಿಕ್‌ ಟಾಕರ್‌

ಕೋವಿಡ್‌-19ನಿಂದಾಗಿ ನಾವು ಬದುಕುವ ರೀತಿಯೇ ಬದಲಾಗಿಬಿಟ್ಟಿದೆ. ಕೆಲವೊಮ್ಮೆ ಈ ಬದಲಾವಣೆಗಳು ನಮಗೆ ವಿಚಿತ್ರವಾದ ಅನುಭವಗಳನ್ನು ಕೊಡಲು ಆರಂಭಿಸಿಬಿಟ್ಟಿವೆ.

ಟಿಕ್‌ಟಾಕ್ ಬಳಕೆದಾರ ಕಾಯ್ ಫಾರ್ಸಿತ್‌ಗೆ ಇಂಥದ್ದೇ ಒಂದು ಅನುಭವವಾಗಿದೆ. ಬ್ರಿಟನ್‌ನಿಂದ ಅಮೆರಿಕಕ್ಕೆ ತೆರಳಿದ್ದ ಫ್ಲೈಟ್‌ ಏರಿದ ಫಾರ್ಸಿತ್‌ಗೆ ಆ ವಿಮಾನದಲ್ಲಿದ್ದಿದ್ದು ತಾವೊಬ್ಬರೇ ಪ್ರಯಾಣಿಕ ಎಂದು ಅರಿತು ನಿಬ್ಬೆರಗಾಗಿದ್ದಾರೆ.

ಅಕ್ರಮ ಮದ್ಯ ಮಾರಾಟ; ರೊಚ್ಚಿಗೆದ್ದ ಮಹಿಳೆಯರಿಂದ ನಾಶ

ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಿಡಿಯೋ ಮಾಡಿಕೊಂಡ ಫಾರ್ಸಿತ್‌ ಬಳಿಕ ಅದನ್ನು ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಬಹುಶಃ ಇದು ಅತ್ಯಂತ ವಿಚಿತ್ರ ಅನುಭವ,” ಎಂದು ಫಾರ್ಸಿತ್‌ ಕ್ಯಾಪ್ಷನ್‌ ಕೊಟ್ಟಿದ್ದಾರೆ. “ವಿಮಾನದಲ್ಲಿರುವುದು ನಾನೊಬ್ಬನೇ ಪ್ರಯಾಣಿಕ ಎಂದು ಕ್ಯಾಬಿನ್ ಸಿಬ್ಬಂದಿ ತಿಳಿಸಿದ್ದಾರೆ. ವಿಮಾನದಲ್ಲಿ ನನಗೆ ಸಿಕ್ಕ ಅತ್ಯಂತ ಆರಾಮದಾಯಕ ಅನುಭವ. ಅವರು ನನಗೆ ಎಲ್ಲಾ ತಿನಿಸುಗಳು ಹಾಗೂ ಅನಿಯಮಿತ ಆಹಾರವನ್ನು ಕೊಟ್ಟರು,” ಎಂದು ತಿಳಿಸಿದ್ದಾರೆ.

ಪ್ರಯಾಣದ ಅವಧಿಯಲ್ಲಿ ಸಿಕ್ಕಷ್ಟು ಮೇಯುತ್ತಾ, ಮೂವಿಗಳನ್ನು ವೀಕ್ಷಿಸಿದ್ದಾಗಿ ಫಾರ್ಸಿತ್‌ ಹೇಳಿಕೊಂಡಿದ್ದಾರೆ.

ಫಾರ್ಸಿತ್‌ ಟಿಕೆಟ್‌ ಅನ್ನು ಮೊದಲ ದರ್ಜೆಗೆ ಏಕೆ ಬಡ್ತಿ ನೀಡಿಲ್ಲ ಎಂದು ಕೆಲ ನೆಟ್ಟಿಗರು ಇದೇ ವೇಳೆ ಪ್ರಶ್ನಿಸಿದರೆ, ಇನ್ನೂ ಕೆಲವರು ತಮಗೂ ಸಹ ಆದ ಇಂಥದ್ದೇ ಅನುಭವವನ್ನು ಸ್ಮರಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...