alex Certify ಬೆರಗಾಗಿಸುವಂತಿದೆ ಗಿನ್ನೆಸ್‌ ವಿಶ್ವದಾಖಲೆಯ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುವಂತಿದೆ ಗಿನ್ನೆಸ್‌ ವಿಶ್ವದಾಖಲೆಯ ಈ ವಿಡಿಯೋ

ಗಿನ್ನೆಸ್​ ವರ್ಲ್ಡ್ ರೆಕಾರ್ಡ್​ನಲ್ಲಿ ಹೆಸರು ನಮೂದಾಗುವುದು ಎಂದರೆ ಸುಲಭದ ಮಾತಲ್ಲ. ಅದರಲ್ಲಿ ಮಾಡುವ ದಾಖಲೆಗಳು ಒಂದೊಂದೂ ಒಂದೊಂದು ರೀತಿಯಲ್ಲಿ ವಿಸ್ಮಯ ಮೂಡಿಸುತ್ತದೆ. ಅಂಥದ್ದರಲ್ಲಿ ಒಂದು ಡೆನ್ಮಾರ್ಕ್‌ನ ಲಾರ್ಸ್ ಆಂಡರ್ಸನ್ ಬಿಲ್ಲುಗಾರನ ಕೌಶಲ.

ಬಿಲ್ಲುಗಾರಿಕೆ ಕೌಶಲನ್ನು ಪ್ರದರ್ಶಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಲಾರ್ಸ್ ಆಂಡರ್ಸನ್ ಅವರು ಒಂದರ ನಂತರ ಒಂದರಂತೆ ಬಾಣ ಬಿಡುತ್ತಾರೆ. ದೂರದಲ್ಲಿ ಇರುವ ಕೀಹೋಲ್ ಅವರ ಬಾಣದ ಗುರಿ. ಅನತಿ ದೂರದಲ್ಲಿ ನಿಂತು ಬಾಣವನ್ನು ಕೀ ಹೋಲ್​ಗೆ ಹಾಕುತ್ತಾರೆ. ಒಂದೇ ಒಂದು ಸೂಜಿಯಷ್ಟು ಗುರಿ ತಪ್ಪಿದರೂ ಬಾಣ ಪಕ್ಕಕ್ಕೆ ಹೋಗುತ್ತದೆ.

ಆದರೆ ಇವರು ಆ ಚಿಕ್ಕ ಹೋಲ್​ನಿಂದ ಬಾಣ ಬಿಡುತ್ತಾರೆ. ಒಟ್ಟು ಏಳು ಬಾಣಗಳನ್ನು ಒಂದಾದ ಮೇಲೊಂದರಂತೆ ಗುರಿ ತಪ್ಪದೇ ಬಿಡುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಅದರ ವಿಡಿಯೋ ವೈರಲ್​ ಆಗಿದೆ. ಕೆಲವೇ ಗಂಟೆಗಳಲ್ಲಿ ಈ ವಿಡಿಯೋ 33 ಸಾವಿರಕ್ಕೂ ಅಧಿಕ ಲೈಕ್ಸ್​ಗಳನ್ನು ಪಡೆದುಕೊಂಡಿದ್ದು, ಇವರ ಕೌಶಲ ನೋಡುಗರನ್ನು ನಿಬ್ಬೆರಗಾಗಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...