alex Certify ಟೈಮ್ಸ್​ ಸ್ಕ್ವೇರ್ ನಲ್ಲಿ ನಡೆದ ಘಟನೆಯಿಂದ ತಬ್ಬಿಬ್ಬಾದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೈಮ್ಸ್​ ಸ್ಕ್ವೇರ್ ನಲ್ಲಿ ನಡೆದ ಘಟನೆಯಿಂದ ತಬ್ಬಿಬ್ಬಾದ ಜನ

ನ್ಯೂಯಾರ್ಕ್​ ಸಿಟಿಯಲ್ಲಿ ಚಿತ್ರೀಕರಿಸಿದ್ದು ಎನ್ನಲಾದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಜನತೆ ಮಾಡರ್ನ್​ ಸೂಪರ್ ಹೀರೋ ಎಂದು ಕರೆದಿದ್ದಾರೆ. ಈ ವಿಡಿಯೋದಲ್ಲಿ ಐಕಾನಿಕ್​ ಟೈಮ್ಸ್​ ಸ್ಕ್ವೇರ್​ ಎದುರು ವ್ಯಕ್ತಿ ಡ್ರೋನ್​ ಕ್ಯಾಮರಾದ ಮೇಲೆ ಹತ್ತಿ ಹಾರಿದ್ದಾನೆ.

ಈ ಡ್ರೋನ್​ ಕ್ಯಾಮರಾದ ಮೇಲಿರುವ ವ್ಯಕ್ತಿ ಯುಟ್ಯೂಬರ್​ ಹಂಟರ್ ಕೋವಾಲ್ಡ್​ ಎಂದು ಗುರುತಿಸಲಾಗಿದೆ. ಈ ವಿಡಿಯೋವನ್ನ ಇನ್​ಸ್ಟಾಗ್ರಾಂನಲ್ಲಿ ಮೊದಲು ಶೇರ್​ ಮಾಡಲಾಗಿದ್ದು, ಇದೀಗ ಸೋಶಿಯಲ್​ ಮೀಡಿಯಾದ ವಿವಿಧ ವೇದಿಕೆಗಳಲ್ಲೂ ವೈರಲ್​ ಆಗ್ತಿದೆ.

ಇನ್ನು ಈ ಸಾಧನದ ಬಗ್ಗೆ ಮಾತನಾಡಿರುವ ಕೋವಾಲ್ಡ್​, ಇದೊಂದು ಇಂಜಿನಿಯರ್ಡ್​ ಸಾಧನವಾಗಿದೆ. ಈ ಸಾಧನವನ್ನ ಕಂಡು ಹಿಡಿಯಲು ನಾನು ವರ್ಷಗಳನ್ನೇ ಸವೆಸಿದ್ದೇನೆ. ಎರಡ್ಮೂರು ಬಾರಿ ಪ್ರಯತ್ನ ವಿಫಲವಾದದ ಬಳಿಕ ನಾನೀಗ ಗೆದ್ದಿದ್ದೇನೆ ಎಂದು ಹೇಳಿದ್ದಾರೆ.

ಈ ವಿಡಿಯೋ ಟ್ವಿಟರ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು 7ಮಿಲಿಯನ್​ಗೂ ಅಧಿಕ ವೀವ್ಸ್​ ಸಂಪಾದಿಸಿದೆ. ಕಮೆಂಟ್​ ಸೆಕ್ಷನ್​ನಲ್ಲಿ ನೆಟ್ಟಿಗರು ಆಶ್ಚರ್ಯ ಹೊರಹಾಕಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...