alex Certify ಮಂಚದ ಕೆಳಗಿದ್ದ ವಿಶ್ವದ ಅತಿದೊಡ್ಡ ಜೇಡ ನೋಡಿ ವ್ಯಕ್ತಿಗೆ ಶಾಕ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಚದ ಕೆಳಗಿದ್ದ ವಿಶ್ವದ ಅತಿದೊಡ್ಡ ಜೇಡ ನೋಡಿ ವ್ಯಕ್ತಿಗೆ ಶಾಕ್..!

ವ್ಯಕ್ತಿಯೊಬ್ಬ ವಿಶ್ವದ ಅತ್ಯಂತ ವಿಷಕಾರಿ ಜೇಡಗಳಲ್ಲಿ ಒಂದನ್ನು ಕಂಡುಕೊಂಡಿದ್ದಾನೆ. ಅದರ ಗಾತ್ರ ಎಷ್ಟು ಎಂದು ಕೇಳಿದ್ರೆ ನೀವು ಖಂಡಿತ ಆಶ್ಚರ್ಯಪಡುತ್ತೀರಾ..!

ಛಾಯಾಗ್ರಾಹಕ ಗಿಲ್ ವಿಜೆನ್ ಎಂಬಾತ ತನ್ನ ಮಲಗುವ ಕೋಣೆಯಲ್ಲಿ ಸಣ್ಣ ಜೇಡಗಳು ಕಾಣಿಸಿಕೊಳ್ಳುವುದನ್ನು ಗಮನಿಸಿದ್ದಾನೆ. ಅವುಗಳು ಎಲ್ಲಿಂದ ಬರುತ್ತಿದೆ ಎಂದು ಕಂಡುಹಿಡಿಯಲು ಅವನು ತನ್ನ ಕೊಠಡಿಯನ್ನು ಪರೀಕ್ಷಿಸಲು ನಿರ್ಧರಿಸಿದ್ದಾನೆ. ತನ್ನ ಹಾಸಿಗೆಯ ಕೆಳಗೆ ನೋಡಿದಾಗ, ಅವನಿಗೆ ಆಘಾತವಾಗಿದೆ.

ವಿಜೆನ್ ಬೃಹತ್ ಬ್ರೆಜಿಲಿಯನ್ ಅಲೆದಾಡುವ ಜೇಡ ಮತ್ತು ಅದರ ಸಂತತಿಯನ್ನು ಕಂಡುಹಿಡಿದಿದ್ದಾನೆ. “ಹಾಸಿಗೆಯ ಕೆಳಗೆ ಅಕ್ಷರಶಃ ಸಾವಿರಾರು ಜೇಡಗಳು ಇದ್ದವು, ಅವುಗಳ ಪಕ್ಕದಲ್ಲಿಯೇ ಅತಿದೊಡ್ಡ ‘ಟಾರಂಟುಲಾ’ ಜೇಡ ವಿಶ್ರಾಂತಿ ಪಡೆಯುತ್ತಿತ್ತು ಅದರ ದೇಹದ ಉದ್ದ 45 ಮಿ.ಮೀ.” ಎಂದು ವಿಜೆನ್ ಹೇಳಿದ್ದಾರೆ.

ಕುತೂಹಲಕಾರಿಯಾಗಿ, ‘ದಿ ಸ್ಪೈಡರ್ ರೂಮ್’ ಎಂಬ ಶೀರ್ಷಿಕೆಯ ಚಿತ್ರಕ್ಕಾಗಿ ವಿಜೆನ್ ವರ್ಷದ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಬ್ರೆಜಿಲಿಯನ್ ಅಲೆದಾಡುವ ಜೇಡಗಳನ್ನು ಸಶಸ್ತ್ರ ಜೇಡಗಳು ಅಥವಾ ಬಾಳೆ ಜೇಡಗಳು ಎಂದೂ ಕರೆಯುತ್ತಾರೆ. ಅದರ ಕಡಿತವು ಮಾನವರಿಗೆ, ವಿಶೇಷವಾಗಿ ಮಕ್ಕಳಿಗೆ ಮಾರಕವಾಗಬಹುದು.

— Wildlife Photographer of the Year (@NHM_WPY) October 12, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...